‘ಯಾವುದೇ ಕಾರಣಕ್ಕೂ ಸಾಲ ಮನ್ನಾ ಮಾಡುವುದಿಲ್ಲ…!’ – ರೈತರಿಗೆ ಬಿಗ್ ಶಾಕ್…!

ನಾಲ್ಕು ವರ್ಷದಿಂದ ಅಚ್ಛೆ ದಿನ್ ಹೆಸರಲ್ಲಿ, ಜನರನ್ನು ಸೆಳೆಯುವ ಉದ್ದೇಶದಿಂದ ಮಕ್ಕಳಿಗೆ ಚಂದಮಾಮ ತೋರಿಸುವಂತೆ, ಪೊಳ್ಳು ಆಶ್ವಾಸನೆಗಳನ್ನು ನೀಡಿ, ನೋಟು ರದ್ದಿನಂತ ಅಪಕ್ವ ನಿರ್ಧಾರಗಳನ್ನು ತೆಗೆದುಕೊಂಡು ಜನರನ್ನು ಸಂಕಷ್ಟಕ್ಕೆ ಸಿಕ್ಕಿಸಿ , ದೈನಿಂದಿನ ಸಾಮಗ್ರಿಗಳು ಹಾಗು ಅನಿಲ ಮತ್ತು ತೈಲದ ಬೆಲೆಯನ್ನು ಮುಗಿಲು ಮುಟ್ಟಿಸಿ, ಜನರ ತೆರಿಗೆ ಹಣವನ್ನು ಅನವಶ್ಯಕ ಪ್ರತಿಮೆಗಳಿಗೆ ದುಂದುವೆಚ್ಚ ಮಾಡಿ, ಹುಚ್ಚನ ಮನೆಯಲ್ಲಿ ಉಂಡವನೇ ಜಾಣ ಎಂಬುವಂತೆ, ಜನರು ನನ್ನನ್ನು ನಂಬಿದ್ದಾರೆ ಎನ್ನುವ ಅತಿಕ್ರಮಣದಿಂದ ಅವರ ತೆರಿಗೆ ಹಣದಲ್ಲಿ ವಿದೇಶ ಪ್ರವಾಸಗಳನ್ನು ಮಾಡುತ್ತ ಮಜಾ ಉಡಾಯಿಸಿ, 2ಜಿ ಸ್ಕ್ಯಾಮ್ ಹಾಗು ರಫೆಲ್ ಡೀಲ್ ನಂತಹ ಹಗರಣಗಳಲ್ಲಿ ಪಾಲ್ಗೊಂಡ ಮೋದಿ ಅವರಿಗೆ ಈ ಪಂಚ ರಾಜ್ಯ ಚುನಾವಣೆಯಲ್ಲಿ ಜನರು ತಕ್ಕ ಪಾಠವನ್ನು ಕಳಿಸಿದ್ದಾರೆ.

ಇಷ್ಟಾದ ಮೇಲಾದರೂ ಮೋದಿ ರೈತರ ಸಾಲ ಮನ್ನಾ ಮಾಡಿ ದೇಶದ ಪರ ಕೆಲಸ ಶುರು ಮಾಡಬಹುದು ಎಂದು ಜನರು ನಿರೀಕ್ಷಿಸಿದ್ದರು. ನಿನ್ನೆ ಪಂಚ ರಾಜ್ಯಗಳ ಲೋಕಸಭ ಚುನಾವಣೆ ಹಿನ್ನಲೆಯಲ್ಲಿ  ಕೇಂದ್ರ ಸರ್ಕಾರ ನಾಲ್ಕು ಲಕ್ಷ ಕೋಟಿ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನಿ ನೀಡಿತ್ತು. ಆದರೆ ಈಗ ಉಲ್ಟಾ ಹೊಡೆದಿದೆ. ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಮತ್ತೆ ನಿರಾಸೆ ಮೂಡಿದೆ. 

ಯಾವುದೇ ಕಾರಣಕ್ಕೂ ರೈತ ಸಾಲಮನ್ನಾ ಮಾಡಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಲಿಖಿತ ಹೇಳಿಕೆ ನೀಡಿದ್ದಾರೆ.

Leave a Reply