ವಿಷಯುಕ್ತ ಪ್ರಸಾದ ಸೇವಿಸಿ ಮೃತಪಟ್ಟ ಘಟನೆ ಬಗ್ಗೆ ಸಿಎಂ ಹೇಳಿದ್ದೇನು…?!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಫೆವಿಕಾಲ್ ಮಿಶ್ರಿತ ಪ್ರಸಾದ ಸೇವಿಸಿ ಐವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ. ಅಲ್ಲದೆ 60ಕ್ಕೂ ಹೆಚ್ಚು ಪಕ್ಷಿಗಳೂ ಸಹ ಈ ಪ್ರಸಾದವನ್ನು ಸೇವಿಸಿ ಮೃತಪಟ್ಟಿವೆ. 

ಅಸ್ವಸ್ಥಗೊಂಡಂತ ಭಕ್ತರಿಗೆ  ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೆನ್ನೈ ನ ಖಾಸಗಿ ಆಸ್ಪತ್ರಯೊಂದರಲ್ಲಿ ಸಿದ್ದಗಂಗಾ ಶ್ರೀಗಳ   ಅರೋಗ್ಯ ವಿಚಾರಿಸಿ, ಈ ದುರ್ಘಟನೆಯಿಂದ ಅಸ್ವಸ್ಥರಾಗಿರುವ ಭಕ್ತರನ್ನು ವಿಚಾರಿಸಲು ಕೆ.ಆರ್  ಆಸ್ಪತ್ರೆಗೆ ಭೇಟಿ ನೀಡಿದ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ನಡೆದಿರುವ ಘಟನೆ ನೋವನ್ನು ತಂದಿದ್ದು, ಮೃತರ ಕುಟುಂಬಕ್ಕೆ ಸರ್ಕಾರವು ಸೂಕ್ತ ಪರಿಹಾರ ಒದಗಿಸಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ದೇವಸ್ಥಾನದಲ್ಲಿ ಪ್ರಸಾದ ನೀಡುವ ಮುನ್ನ ಜಾಗೃತಿ ವಹಿಸಬೇಕಿತ್ತು. ಆದರೆ ಯಾವುದೇ ಮುಂಜಾಗೃತೆ ವಹಿಸದೇ ಇರುವುದರಿಂದ ಈ ಅನಾಹುತ ನಡೆದಿದೆ. ಈ ಕುರಿತು ಸಂಪೂರ್ಣ ವಿಷಯನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. 

ಅಲ್ಲದೆ ಮೃತಪಟ್ಟ ಭಕ್ತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಧನ ನೀಡುವುದಾಗಿ ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಈ ಘಟನೆಯಿಂದ ತಂದೆಯನ್ನು ಕಳೆದುಕೊಂಡ ಬಾಲಕಿಯ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಬಾರಿಸುತ್ತೇನೆ ಎಂದು ಸಚಿವ ಸಿ.ಎಸ್ ಪುಟ್ಟರಾಜು ಅವರು ಹೇಳಿದ್ದಾರೆ. 

Leave a Reply