ಹೇಮಾವತಿ ಹರಿಕಾರ ಎಂದೇ ಖ್ಯಾತರಾಗಿರುವ ಸಚಿವ ಎಸ್. ಆರ್ ಶ್ರೀನಿವಾಸ್ ಅವರಿಂದ ತುಮಕೂರು ಜನತೆಗೆ ಸಿಹಿ ಸುದ್ದಿ…!

ಕೆಲವು ವರುಷಗಳ ಹಿಂದೆ ತುಮಕೂರು ಜಿಲ್ಲೆಗೆ ಹೇಮಾವತಿ ನದಿಯ ನೀರು ಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ, ಜನಪರ ಹೋರಾಟ ನಡೆಸಿ, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದ ಎಸ್.ಆರ್ ಶ್ರೀನಿವಾಸ್ ಅವರು, ಈಗ ಸತತ ಬರಗಾಲ ಪೀಡಿತರಾಗಿ, ಸಂಕಷ್ಟದಲ್ಲಿ ಸಿಕ್ಕಿಬಿದ್ದಿರುವ ತುಮುಕೂರು ವಾಸಿಗಳಿಗೆ ಹೇಮಾವತಿ ನದಿಯ ನೀರು ಹಲವಾರು ದಿನಗಳಿಂದ ಪೂರೈಕೆ ಆಗುತ್ತಿಲ್ಲ ಎನ್ನುವ ವಿಷಯ ಗಮನಕ್ಕೆ ಬಂದೊಡನೆ, ಇದರ ಕುರಿತು ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ  ಹಾಗು ನೀರಾವರಿ ಸಚಿವ ಡಿ ಕೆ ಶಿವಕುಮಾರ ಅವರೊಂದಿಗೆ ಗಂಭೀರ ಚರ್ಚೆ ನಡೆಸಿ  ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸಮಾಲೋಚನೆ ನಡೆಸಿದ್ದಾರೆ. 

ಪ್ರತಿ ವರ್ಷ ತುಮಕೂರು ಜಿಲ್ಲೆಯಲ್ಲೇ ಅತೀ ಹೆಚ್ಚು ನೀರನ್ನು ತಮ್ಮ ಗುಬ್ಬಿ ಕ್ಷೇತ್ರಕ್ಕೆ ಹರಿಸಿಕೊಳ್ಳುತ್ತಿದ್ದ ಸಚಿವ ಎಸ್.ಆರ್. ಶ್ರೀನಿವಾಸ್ ರವರು, ಈ ಬಾರಿ ನೀರಿನ ಹರಿವು ತುಮಕೂರು ಜಿಲ್ಲೆಗೆ ಕಡಿಮೆಯಾಗುತ್ತಿದ್ದಂತೆ ಸಹಜವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಡೆದ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ, ಸಚಿವರುಗಳು ಮತ್ತು ಖುದ್ದು ಮುಖ್ಯಮಂತ್ರಿಗಳ ಎದುರೇ ಶ್ರೀನಿವಾಸ್ ಅವರು ಈ ವಿಷಯದ ಬಗ್ಗೆ ಮಾತನಾಡಿದರು. ತುಮಕೂರು ಜಿಲ್ಲೆ ಮತ್ತು ತಮ್ಮ ಗುಬ್ಬಿ ತಾಲ್ಲೂಕಿಗೆ ಹೇಮೆ ಹರಿಸುವ ವಿಷಯವಾಗಿ ಹಾಸನ ಮತ್ತು ತುಮಕೂರು ಜಿಲ್ಲೆಯ ಪ್ರಮುಖ ಶಾಸಕರುಗಳೊಂದಿಗೆ ಚರ್ಚಿಸಿದರು. 

ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮತ್ತು ಎಸ್.ಆರ್. ಶ್ರೀನಿವಾಸ್ ರವರು ಎರಡೂ ಜಿಲ್ಲೆಯ ಜನತೆಗೆ ಅನ್ಯಾಯವಾಗದಂತೆ, ಪ್ರಮುಖರ ಸಭೆ ಕರೆದು, ಹೇಮಾವತಿ ನೀರಿನ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ತುಮಕೂರು ಜಿಲ್ಲೆಗೆ ಹೇಮೆ ಹರಿಯಲಿದೆ. 

One thought on “ಹೇಮಾವತಿ ಹರಿಕಾರ ಎಂದೇ ಖ್ಯಾತರಾಗಿರುವ ಸಚಿವ ಎಸ್. ಆರ್ ಶ್ರೀನಿವಾಸ್ ಅವರಿಂದ ತುಮಕೂರು ಜನತೆಗೆ ಸಿಹಿ ಸುದ್ದಿ…!

Leave a Reply