ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹೇಗೆ ಗೊತ್ತಾ…?

ಇನ್ನು ಚಿರಯುವಕನಂತೆ ದಿನಕ್ಕೆ 18 ಘಂಟೆಗಳ ಕಾಲ ರಾಜ್ಯಕ್ಕಾಗಿ ಹುಮ್ಮಸ್ಸಿನಿಂದ ದುಡಿಯುತ್ತಿರುವ ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಭಾನುವಾರ ತಮ್ಮ 59ನೇ ವರ್ಷಕ್ಕೆ ಕಾಲಿಟ್ಟರು.

ಈ ಸುಸಂದರ್ಭದಲ್ಲಿ ಎಚ್.ಡಿ ದೇವೇಗೌಡ, ಡಾ. ಶಿವರಾಜ್ ಕುಮಾರ್, ದೊಡ್ಡಣ್ಣ, ರಮೇಶ್ ಅರವಿಂದ್, ಅಜಯ್ ರಾವ್, ರಂಗಾಯಣ ರಘು, ಪ್ರಜ್ವಲ್ ದೇವ್ರಾಜ್, ಸುಂದರ್ ರಾಜ್, ಪ್ರಣಾಮ್ ದೇವರಾಜ್, ಹೇಗೆ ಹಲವಾರು ಗಣ್ಯಾತಿ ಗಣ್ಯರು ಕುಮಾರಸ್ವಾಮಿ ಅವರಿಗೆ ಶುಭಕೋರಿ, ಅವರೊಂದಿಗಿನ ಒಡನಾಟದ ಅನುಭವವನ್ನು ಹಂಚಿಕೊಂಡರು. 

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ದಾರುಣ ಘಟನೆಗಳಿಂದ ಮನನೊಂದ ಕಾರಣ ಯಾವುದೇ ರೀತಿಯ ಆಚರಣೆಯನ್ನು ಮಾಡುವುದಿಲ್ಲ. ಬದಲಾಗಿ ನನ್ನ ಕುಟುಂಬದವರ ಜೊತೆಗೆ ಈ ದಿನವನ್ನು ಕಳೆಯುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕೂಡ ತಂದೆಯ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲೇ ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿದ್ದಾರೆ.  

 

2 thoughts on “ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹೇಗೆ ಗೊತ್ತಾ…?

  1. Prasannagowda says:

    Happy birthday to you sir good job sir

  2. Vinay Kumar says:

    Happy’birthday my god…..

Leave a Reply