ನಾಲ್ಕೂವರೆ ವರ್ಷಗಳಲ್ಲಿ ಮೋದಿ ವಿದೇಶ ಪ್ರವಾಸಕ್ಕೆ ಖರ್ಚಾಗಿರುವುದು ಎಷ್ಟು ಗೊತ್ತಾ…? ಕೇಳಿದರೆ ಬೆಚ್ಚಿ ಬೀಳುತ್ತೀರ…!

ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕಿಂತ ಹೆಚ್ಚು ಬೇರೆ ದೇಶಗಳಲ್ಲೇ ಕಾಣಿಸಿಕೊಳ್ಳುತ್ತಾರೆ. ಮೋದಿ ಅವರು ವಾರದಲ್ಲಿ ಸರಾಸರಿ ಮೂರ್ನಾಲ್ಕು ದಿವಸ ವಿದೇಶ ಪ್ರವಾಸದಲ್ಲೇ ಕಳೆಯುತ್ತಾರೆ. ಇವರ ಈ ಐಷಾರಾಮಿ ಪ್ರವಾಸಗಳಿಗೆ  ಕರ್ಚಾಗುತ್ತಿರುವ ಹಣ ಎಷ್ಟು ಎಂದು ತಿಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರ.

ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿಕೆ ಸಿಂಗ್ ಅವರು ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಗಳ
ಖರ್ಚು ವೆಚ್ಚಗಳ ಬಗ್ಗೆ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದು,  ಮೋದಿ ಅವರು ಈವರೆಗೂ ಒಟ್ಟು 84 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಇದಕ್ಕೆ ಖರ್ಚಾಗಿರುವುದು ಬರೋಬರಿ 2500 ಕೋಟಿ ರೂ. ಗಳು ಮಾತ್ರ…! 

ಹೌದು. ನಂಬಲು ಅಸಾಧ್ಯವಾದರೂ, ಇದು ನಿಜಾಂಶ. ಮೋದಿ ಅವರು ಈವರೆಗೂ ದೇಶದ  ಜನತೆಯ ತೆರಿಗೆ ಹಣದಲ್ಲಿ ಇಂತಹ ಐಷಾರಾಮಿ ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ.ಜನರು ಕಷ್ಟ ಪಟ್ಟು, ಬೆವರು ಸುರಿಸಿ, ತಮ್ಮ ಅನಾರೋಗ್ಯಗಳನ್ನೂ ಲೆಕ್ಕಿಸದೆ ದುಡಿಯುವ ದುಡ್ಡಿನಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾರೆ. ಆದರೆ ಅವರೇ ಆಯ್ಕೆ ಮಾಡಿಕೊಂಡಿರುವ ನಮ್ಮ ಪ್ರತಿನಿಧಿಗಳು ಅವರ ಬೆವರಿನ ಪ್ರತಿಫಲವನ್ನು ಹೀಗೆ ಅನುಭವಿಸುತ್ತಿದ್ದಾರೆ. 

Leave a Reply