ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ….?! ರಾಜ್ಯದ ಜನತೆಗೆ ಅಚ್ಚರಿಯ ಸುದ್ದಿ…!

 ಸಣ್ಣದಿರಲಿ, ದೊಡ್ಡದಿರಲಿ ಪ್ರತಿಯೊಂದು ಕೆಲಸಕ್ಕೂ ಬೆಂಗಳೂರಿಗೆ ಹೋಗಿ ಬರುವಂತ ಗೋಜು 
ಉತ್ತರ ಕರ್ನಾಟಕದ ಜನತೆಗೆ ತಪ್ಪಿಸಲು ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದರು. ಉತ್ತರ ಕರ್ನಾಟಕದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಚ್.ಡಿ ಕುಮಾರಸ್ವಾಮಿ ಅವರು ಬೆಳಗಾವಿಯನ್ನು ಕರ್ನಾಟಕ ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡುವ ಆಲೋಚನೆಯಲ್ಲಿದ್ದರು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದ್ದರಿಂದ ಇದು ಕೇವಲ ಆಲೋಚನೆಯಾಗೆ ಉಳಿದುಕೊಳ್ಳುವಂತೆ ಆಯಿತು. 

ಆದರೂ, ಉತ್ತರ ಕರ್ನಾಟಕದ ಮಂದಿಗೆ ಕುಮಾರಸ್ವಾಮಿ ಅವರು ಒಂದು ಸಿಹಿ ಸುದ್ದಿ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಆಸೆ ಇಂದು ಈಡೇರುವಂತೆ ಇದೆ. ಉತ್ತರ ಕರ್ನಾಟಕ ಜನತೆಗೆ ಅನುಕೂಲವಾಗಲೆಂದು ರಾಜ್ಯದ ರಾಜಧಾನಿ ಬೆಂಗಳೂರಿಂದ ಹಲವಾರು ಸರ್ಕಾರೀ ಇಲಾಖೆಯನ್ನು ಸ್ಥಳಾಂತರ ಮಾಡಲಾಗುವುದು ಎಂದು ಹೇಳಾಗುತ್ತಿದೆ. 
ಈ ಹಿನ್ನೆಲೆಯಲ್ಲಿ 9 ಸರ್ಕಾರಿ ಇಲಾಖೆಗಳನ್ನು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಸಂಜೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

One thought on “ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ….?! ರಾಜ್ಯದ ಜನತೆಗೆ ಅಚ್ಚರಿಯ ಸುದ್ದಿ…!

  1. ಕೇಂದ್ರ ಸರ್ಕಾರ ಯಾಕೆ ಅಡ್ಡಗಾಲು ಹಾಕಬೇಕು ಮಹಿರಾಷ್ಟ್ರದಲ್ಲಿ ಮೂರು ತಮಿಳುನಾಡಿನಲ್ಲಿ ಎರಡು ಉಪರಾಜಧಾನಿಗಳಿರುವಾಗ?

Leave a Reply