“ವರ್ಗಾವಣೆ ದಂಧೆ ಸಾಬೀತು ಮಾಡಿದರೆ, ನಾನು ಈ ಸ್ಥಾನದಲ್ಲೇ ಮುಂದುವರೆಯುವುದಿಲ್ಲ” – ಆರೋಪಿಸುವವರಿಗೆ ಸತ್ಯದ ಕಪಾಳ ಮೋಕ್ಷ ನೀಡಿದ ಸಿಎಂ…!

ಕಳೆದು ಒಂದು ವಾರದಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೂ ಹಾಗು ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪನವರಿಗು ಮಾತಿನ ಚಕಮಕಿ ನಡೆಯಿತು. ‘ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇದ್ದುಕೊಂಡು ಸರ್ಕಾರೀ ಅಧಿಕಾರಿಗಳ ದಂಧೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ ಬಿಎಸ್ ವೈ ಗೆ ಎಚ್ ಡಿಕೆ ಸಾಕ್ಷಿ ನೀಡಿ ಎಂದು ಹೇಳಿ ಅವರ ಬಾಯಿ ಮುಚ್ಚಿಸಿದರು. ಅಲ್ಲದೆ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಿ ವಾಸಮಾಡುತ್ತಿದ್ದರು ಎಂದು ನನಗೆ ಗೊತ್ತಿದೆ ಎಂದು ಲೇವಡಿ ಮಾಡಿದರು.

“ಮುಖ್ಯಮಂತ್ರಿಯಾದ ನಂತರ ವರ್ಗಾವಣೆ ವಿಚಾರದಲ್ಲಿ ದಂಧೆ ಮಾಡಿರುವ ಬಗ್ಗೆ ಒಂದೇ ಒಂದು ಪ್ರಕರಣ ಸಾಬೀತುಪಡಿಸಿದರೆ ಒಂದು ಕ್ಷಣವೂ ಈ ಸ್ಥಾನದಲ್ಲಿ ಮುಂದುವರಿಯುವುದಿಲ್ಲ.
ವೆಸ್ಟೆಂಡ್‌ನ‌ಲ್ಲಿ ಕೊಠಡಿ ಪಡೆದಿದ್ದೇನೆ. ಆದರೆ, ಒಬ್ಬನೇ ಒಬ್ಬ ಸರ್ಕಾರಿ ಅಧಿಕಾರಿಯನ್ನು ಅಲ್ಲಿಗೆ ಕರೆಸಿಕೊಂಡು ಮಾತನಾಡಿಲ್ಲ. ಹಿಂದೆಯೂ ಸಾಕಷ್ಟು ಮುಖ್ಯಮಂತ್ರಿಗಳು ಅಲ್ಲಿ ಕೊಠಡಿ ಇಟ್ಟುಕೊಂಡಿದ್ದರು. ಅದೇ ರೀತಿ ನಾನೂ ಕೊಠಡಿ ಪಡೆದುಕೊಂಡಿದ್ದೇನೆ.ಅಷ್ಟಕ್ಕೂ, ಸರ್ಕಾರಿ ಖಜಾನೆಯ ಹಣವನ್ನು ಅದಕ್ಕೆ ಬಳಕೆ ಮಾಡಿಕೊಳ್ಳುತ್ತಿಲ್ಲ.
ಬರ ಕುರಿತ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ನಾನು ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ತಂಗುತ್ತೇನೆ ಎಂದು ಯಡಿಯೂರಪ್ಪ ಸಹಿತ ಬಿಜೆಪಿಯ ಕೆಲವರು ಆರೋಪ ಮಾಡಿದ್ದಾರೆ. ಆದರೆ, ನಾನು ಜೆ.ಪಿ.ನಗರದ ಮನೆಯಲ್ಲೇ ವಾಸವಾಗಿದ್ದೇನೆ. ಹಿಂದೆ
ಯಾರ್ಯಾರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಿದ್ದರು ಎನ್ನುವುದು ಗೊತ್ತಿದೆ. ” ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕರ ಬಾಯಿ ಮುಚ್ಚಿಸಿದರು.

Leave a Reply