ಕೆಜಿಎಫ್ vs ಝೀರೋ ! ಗೆದ್ದಿದ್ದು ಯಾರು..?

ಮೂರೂ ವರ್ಷ. ಮೂರೂ ಸಾವಿರಕ್ಕೂ ಹೆಚ್ಚು ಕಲಾವಿದರು. ಒಂದು ಸಿನಿಮಾ, ಕೆಜಿಎಫ್.  ಹಲವು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತವೆ. ಆದರೆ ಕೆಲವು ಚಿತ್ರಗಳು ಮಾತ್ರ ಕನ್ನಡ ಚಿತ್ರರಂಗಕ್ಕೆ ಹೆಸರು ತಂದುಕೊಡುತ್ತದೆ. ಕೆಜಿಎಫ್ ಅಂತಹ ಒಂದು ಚಿತ್ರ. ಚಿತ್ರತಂಡ ಈ ಸಿನಿಮಾವನ್ನು ಘೋಷಿಸಿದಾಗ ಇದು ಕನ್ನಡದ ಬಹು ನಿರೀಕ್ಷಿತ ಚಿತ್ರ ಎಂದು ಹೇಳಲಾಗುತ್ತಿತ್ತು. ಆದರೆ ಬಿಡುಗಡೆ ಹಂತಕ್ಕೆ ಬರುವಷ್ಟರಲ್ಲಿ ಇಡೀ ದೇಶದಲ್ಲೇ ಇದೊಂದು ಬಹು ನಿರೀಕ್ಷಿತ ಚಿತ್ರವಾಗಿ ಬೆಳೆದು ನಿಂತಿದೆ.

ದಕ್ಷಿಣ ಭಾರತದ ಚಿತ್ರಗಳು, ಅದರಲ್ಲೂ ಕನ್ನಡ ಸಿನಿಮಾಗಳನ್ನು ಕಡೆಗೆಣಿಸುತ್ತಿದ್ದ ಬಾಲಿವುಡ್ ಚಿತ್ರರಂಗದ ಎದುರು ಅದೇ ಚಿತ್ರರಂಗದ ಅತಿದೊಡ್ಡ ಸ್ಟಾರ್ ಶಾರುಖ್ ಖಾನ್ ಅವರ ವಿರುದ್ಧ ಕನ್ನಡದ ಒಬ್ಬ ನಟ ಸರಿ ಸಮಾನವಾಗಿ ನಿಂತುಕೊಳ್ಳುವ ಹಂತಕ್ಕೆ ಕನ್ನಡ ಚಿತ್ರರಂಗವನ್ನು ಕೆಜಿಎಫ್ ಚಿತ್ರ ಬೆಳೆಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸುಸಂದರ್ಭ ಒದಗಿದೆ. 

ಕೆಜಿಎಫ್ ಚಿತ್ರವನ್ನು ಝೀರೋ ಸಿನಿಮಾ ಬಿಡುಗಡೆಯಾಗುವ ದಿನವೇ ಬಿಡುಗಡೆ ಮಾಡುವುದು ಒಳ್ಳೆಯದಲ್ಲ ಎಂದು ಎಷ್ಟೋ ಜನ ಹೇಳಿದರು, ಕೆಜಿಎಫ್ ಚಿತ್ರತಂಡ ಅವರ ಎರಡು ವರ್ಷದ ಪರಿಶ್ರಮದ ಮೇಲೆ ಇಟ್ಟ ನಂಬಿಕೆಯಿಂದ ಅದೇ ದಿನ ಚಿತ್ರವನ್ನು ರಿಲೀಸ್ ಮಾಡಿದೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಈಗಾಲಿನಿಂದಲೇ ಇದರ ಎರಡನೇ ಪುಟಕ್ಕೆ ಕಾಯುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಚಿತ್ರಕ್ಕೆ ದೇಶದೆಲ್ಲಡೆ ಅದ್ಭುತ ಪ್ರತಿಕ್ರಿಯೆ ದೊರಕಿದೆ. ನಿರ್ದೇಶನ, ಛಾಯಾಗ್ರಹಣ, ಸಂಗೀತ, ಕತೆ, ಚಿತ್ರಕತೆ, ಡೈಲಾಗ್ಸ್, ಅಭಿನಯ ಎಲ್ಲವೂ ಅಚ್ಚುಕ್ಕಟ್ಟಾಗಿ ಮೂಡಿಬಂದಿರುವ ಒಂದು ಅಪರೂಪದ ಸಿನಿಮಾ ಇದಾಗಿದೆ. ಆದ್ದರಿಂದ ಈ ಚಿತ್ರ ಕನ್ನಡ ಚಿತ್ರರಂಗದ ಪುಟದಲ್ಲಿ ಎಂದಿಗೂ ಅಳಿಸಲಾಗದ ಒಂದು ‘ ಮಾಸ್ಟರ್ ಪೀಸ್’ ಎಂದೇ ಹೇಳಬಹುದು. 

ಮತ್ತೊಂದು ಕಡೆ, ಕೆಜಿಎಫ್ ಗೆ ಸವಾಲ್ ಆಗಿ ನಿಂತಿದ್ದ, ಬಾಲಿವುಡ್ ಬಾದ್ ಶಾಹ್ ಶಾರುಖ್ ಖಾನ್ ಅಭಿನಯದ ಝೀರೋ, ಅಭಿಮಾನಿಗಳಿಗೆ ಹಬ್ಬದ ಊಟ ಬಡಿಸಿದಂತಾಗಿದ್ದರೂ ಸಾಮಾನ್ಯ ಪ್ರೇಕ್ಷರಿಗೆ ನಿರಾಸೆಯನ್ನುಂಟು ಮಾಡಿದೆ. ಶಾರುಖ್ ಹಾಗು ಅನುಷ್ಕಾ ಅಭಿನಯ ಒಂದು ಹಂತ ಮೇಲಿದ್ದರೂ, ಚಿತ್ರ ಬೋರ್ ಹೊಡೆಯುತ್ತದೆ ಎಂದು ಹೇಳಲಾಗುತ್ತಿದೆ. 200 ಕೋಟಿ ಬೃಹತ್ ಬಜೆಟ್ ನಲ್ಲಿ ತಯಾರಾದ ಚಿತ್ರದ ಛಾಯಾಗ್ರಹಣ ಮನೋಜ್ಞವಾಗಿದ್ದರೂ, ಚಿತ್ರದ ಕತೆ ಹೆಣೆಯುವುದರಲ್ಲಿ ನಿರ್ದೇಶಕನು ಸೋತಿದ್ದಾನೆ. ಶಾರುಖ್ ಎಂದಿನಂತೆ ಅದ್ಬುತವಾಗಿ ನಟಿಸಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನುಷ್ಕಾ ಶರ್ಮ ಕೂಡ ತಮ್ಮ ವೃತ್ತ ಜೀವನದ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇದು ಶಾರುಖ್ ಅವರ ಸೋಲು ಅನ್ನುವುದಕ್ಕಿಂತ ನಿರ್ದೇಶಕ ಆನಂದ್ ರೈ ಅವರ ಸೋಲು ಎಂದು ಹೇಳಬಹುದು.

Leave a Reply