ಕರ್ನಾಟಕದ ಈ ಪೊಲೀಸ್ ಠಾಣೆಗೆ ದೇಶದ ಐದನೇ ಬೆಸ್ಟ್ ಪೊಲೀಸ್ ಠಾಣೆ ಎಂಬುವ ಬಿರುದು…!

ರಾಜ್ಯದಲ್ಲಿ ಪೊಲೀಸ್ ನ ಮಹತ್ವ ಹಾಗು ಪೊಲೀಸ್ ಹಾಗು ಪಬ್ಲಿಕ್ ನ ನಡುವಿನ ಸಂಬಂಧದ ಮಹತ್ವ ಅರಿತ ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದೊಡನೆ ಪೊಲೀಸ್ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದರು. ಅವರಿಗೆ ಶಿಸ್ತಿನ ಪಾಠವನ್ನೂ ಮಾಡಿದರು. ಇದರ ಪ್ರತಿಫಲವಾಗಿ ಮೊಟ್ಟ ಮೊದಲನೇ ಬಾರಿಗೆ ಕರ್ನಾಟಕದ ಒಂದು ಪೊಲೀಸ್ ಠಾಣೆ ಬೆಸ್ಟ್ ಪೊಲೀಸ್ ಸ್ಟೇಷನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಸಾರ್ವಜನಿಕರೊಟ್ಟಿಗಿನ ಉತ್ತಮ ಸಂಬಂಧ, ಸಂಪರ್ಕ, ಅಪರಾಧ ಪ್ರಮಾಣ ಹಾಗೂ ಸಿಬ್ಬಂದಿಯ ಶಿಸ್ತು ಸೇರಿದಂತೆ ವಿವಿಧ ಅಂಶಗಳಿಂದ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್‌ ಠಾಣೆ ದೇಶದಲ್ಲೇ 5ನೇ ಅತ್ಯುತ್ತಮ ಪೊಲೀಸ್​ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಿರುದು ನೀಡುವ ಮುನ್ನ ದೆಹಲಿಯಿಂದ ಕೇಂದ್ರ ಗೃಹ ಇಲಾಖೆಯ ವಿಶೇಷ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತದೆ. ಸಾರ್ವಜನಿಕರ ಜತೆ ಪೊಲೀಸರ ಉತ್ತಮ ಸಂಬಂಧ, ಪೊಲೀಸ್‌ ಠಾಣೆ ಕಟ್ಟಡ, ಶುಚಿತ್ವ, ಅಪರಾಧ ಪ್ರಮಾಣ, ಪೊಲೀಸ್‌ ಸಿಬ್ಬಂದಿಯ ಶಿಸ್ತು, ಸಮವಸ್ತ್ರ ಹಾಗೂ ಸಾರ್ವಜನಿಕರಿಂದ ಠಾಣೆಯ ಸಂಪೂರ್ಣ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸಿ ನಿರ್ಧರಿಸಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ದೇಶದ ಟಾಪ್‌ 10 ಠಾಣೆಗಳನ್ನ ಆಯ್ಕೆ ಮಾಡಲಾಗುತ್ತದೆ.

96 ರಲ್ಲಿ 70 ಕೇಸ್​ಗಳು ಸಾಲ್ವ್:​ ಗುಡಗೇರಿ ಪೊಲೀಸ್‌ ಠಾಣೆಯಲ್ಲಿ ಓರ್ವ ಪಿಎಸ್‌ಐ, ಐವರು ಎಎಸ್‌ಐ, ಏಳು ಹೆಡ್‌ ಕಾನ್ಸ್‌ಟೇಬಲ್‌ ಹಾಗೂ ಒಂಭತ್ತು ಜನ ಕಾನ್ಸ್‌ಟೇಬಲ್‌ಗಳು ಸೇರಿದಂತೆ ಒಟ್ಟು 22 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2018ರಲ್ಲಿ ದಾಖಲಾದ 96 ಕೇಸ್​ಗಳ ಪೈಕಿ 70 ಕೇಸ್​ಗಳನ್ನ ಬಗೆಹರಿಸಿದ್ದಾರೆ. ಇನ್ನು ಕಳೆದ ವರ್ಷ ದಾಖಲಾದ 82 ಅಪರಾಧ ಪ್ರಕರಣಗಳಲ್ಲಿ 80 ಪ್ರಕರಣಗಳನ್ನ ಇತ್ಯರ್ಥಪಡಿಸುವಲ್ಲಿ ಠಾಣೆ ಸಫಲವಾಗಿದೆ. ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಗುಡಗೇರಿಯಲ್ಲಿ ಎರಡು ಗುಂಪುಗಳ ನಡುವೆ ಗುಂಪು ಘರ್ಷಣೆ ಉಂಟಾಗಿ, ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು. ಇದ್ರಿಂದ ಬೇಸತ್ತ ಹಳ್ಳಿಯ ಜನರು ಗ್ರಾಮ ತೊರೆದು ವಲಸೆ ಹೋಗುತ್ತಿದ್ದರು. ಇದಕ್ಕೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ಈ ಗ್ರಾಮದಲ್ಲಿ ಒಂದು ಪೊಲೀಸ್​ ಠಾಣೆಯನ್ನು ತೆರೆಯಲಾಯಿತು. 631 ಚ.ಕಿ.ಮೀ ವ್ಯಾಪ್ತಿ ಹೊಂದಿರುವ ಗುಡಗೇರಿ ಠಾಣಾ ವ್ಯಾಪ್ತಿಗೆ 21 ಹಳ್ಳಿಗಳನ್ನು ಸೇರಿಸಲಾಗಿತ್ತು. ಅಂದಿನಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದ ಠಾಣೆ ಇಂದು ದೇಶದ 5ನೇ ಅತ್ಯುತ್ತಮ ಎನಿಸಿಕೊಂಡಿದೆ.


2018ರ ಟಾಪ್​-10 ಪೊಲೀಸ್​ ಠಾಣೆಗಳು ಇಂತಿವೆ: ​1. ರಾಜಸ್ಥಾನ- ಕುಲು 2. ಅಂಡಮಾನ್‌-ಕ್ಯಾಂಪೆಲ್‌ಬೇ 3. ಪ.ಬಂಗಾಳ-ಫರಕ್ಕಾ 4. ಪುದುಚೇರಿ-ನೆಟ್ಟಪಕ್ಕಳಂ 5. ಕರ್ನಾಟಕದ-ಗುಡಗೇರಿ 6. ಹಿಮಾಚಲ ಪ್ರದೇಶದ-ಚೋಪಾಲ್‌ 7. ರಾಜಸ್ಥಾನ-ಲಖೇರಿ 8. ತಮಿಳುನಾಡು-ಪೆರಿಯಾಕುಲಂ 9. ಉತ್ತರಾಖಂಡ-ಮುನ್ಸ್ಯಾರಿ 10. ಗೋವಾ-ಚುರ್ಚೋರಿಂ

Leave a Reply