ಮರಳು ಮಾಫಿಯಾದಲ್ಲಿ ಬಾಗಿಯಾಗಿರುವವರು ಎಷ್ಟೇ ಪ್ರಬಲರಾಗಿದ್ದರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ…! – ಎಚ್.ಡಿ ಕುಮಾರಸ್ವಾಮಿ

ದೇಶದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ಹೆಚ್ಚಾದಂತೆ ಮರಳು, ಕಲ್ಲು ಬೇಡಿಕೆ ಏರುತ್ತದೆ. ಮರಳು ಸಂಗ್ರಹಕ್ಕಾಗಿ ನಿರ್ದಿಷ್ಟ ಸ್ಥಳಗಳಿರುತ್ತವೆ. ಸುಮ್ಮನೆ ನದಿ, ಕೆರೆ ಭಾಗಗಳಿಂದ ಮರಳು ಎತ್ತುವಂತಿಲ್ಲ.ಅದರೆ, ನಿಯಮಗಳನ್ನು ಮೀರುವುದು ದುಷ್ಟರಿಗೆ ಚಿಟಿಕೆ ಹೊಡೆದಷ್ಟು ಸುಲಭ. ಸಮಯ ಹಾಗೂ ದುಡ್ಡು ಉಳಿಸಲು ಸುಲಭವಾಗಿ ಸಿಗುವ ತಾಣದಲ್ಲಿ ಕದಿಯುತ್ತಾರೆ. ಈ ಅಕ್ರಮ ಮರಳು ದಂಧೆಯೇ ಮರಳು ಮಾಫಿಯಾ. ಈ ದಂಧೆಯಲ್ಲಿ ಸಮಾಜದ ಮುಖ್ಯ ಸ್ತಂಭಗಳಾದ ಪೊಲೀಸ್, ರಾಜಕಾರಣಿಗಳು ಹೀಗೆ ಎಲ್ಲರೂ ಕೈ ಮಿಲಾಯಿಸಿರುತ್ತಾರೆ. ದಿನಕ್ಕೆ ಇಷ್ಟು ಕೋತಿ ಅಂತ ಲಂಚ ಪಡೆಯುತ್ತಾರೆ. ಇವರಿಗೆ ಬಲೇ ಬೀಸಲು ಹೋದ ಹಲವಾರು ನಿಷ್ಠಾವಂತ ಅಧಿಕಾರಿಗಳು ಇವರ ಹಣ, ರಾಜಕೀಯ ಪ್ರಾಬಲ್ಯ ಹಾಗು ಗೂಂಡಾಗಿರಿಗೆ ಬಲಿಯಾಗಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದೊಡನೆ ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡು ರಾಜ್ಯದ ಆದ್ಯಂತ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಈಗ ರಾಜ್ಯದಲ್ಲಿನ ಮರಳು ಮಾಫಿಯಾವನ್ನು ಸಂಪೂರ್ಣವಾಗಿ ನಿಲ್ಲಿಸಲು, ಎಚ್.ಡಿ ಕುಮಾರಸ್ವಾಮಿ ಅವರು ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ.

ಇದರ ಕುರಿತು ಮಾತನಾಡಿದ ಅವರು ” ಮರಳು ಮಾಫಿಯಾದಲ್ಲಿ ಭಾಗಿಯಾಗುವವರು ಎಷ್ಟೇ ಪ್ರಭಾವಶಾಲಿಯಾಗಿದ್ದರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

One thought on “ಮರಳು ಮಾಫಿಯಾದಲ್ಲಿ ಬಾಗಿಯಾಗಿರುವವರು ಎಷ್ಟೇ ಪ್ರಬಲರಾಗಿದ್ದರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ…! – ಎಚ್.ಡಿ ಕುಮಾರಸ್ವಾಮಿ

  1. First you take all stock hard to Goverment under. Give PWD department.
    PWD Collect. Stock sand in hards. Give Ration card system sand to lorry.
    Employ lorge no of pwd workers this work
    Govt revenue incrase 20000 crore in 1 year

Leave a Reply