ಸಿಎಂ ಕುಮಾರಸ್ವಾಮಿ ದಯೆಯಿಲ್ಲದೆ ಶೂಟ್ ಮಾಡಿ ಎಂದು ಹೇಳಿದ್ದು ಯಾರ ಬಗ್ಗೆ…! – ಖಡಕ್ ಕುಮಾರಣ್ಣ

ನಮ್ಮ ದೇಶದ ಕಾನೂನಿನ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ತೀವ್ರ ಅಸಮಾಧಾನವಿದೆ. ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಯಾವುದೊ ಒಂದು ನಿಪ್ಪವೊಡ್ಡಿ, ಜಾಮೀನು ತೆಗೆದುಕೊಂಡು ರಾಜಾರೋಷವಾಗಿ ಓಡಾಡುತ್ತಾರೆ. ಇನ್ನು ಮುಗ್ದ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ, ಕೊಲೆಗಳನ್ನು ಮಾಡಿದವರು ಕೂಡ, ಜೈಲಿನಲ್ಲಿ ಹೊತ್ತು ಹೊತ್ತಿಗೆ ಊಟ, ಕಣ್ಣು ತುಂಬ ನಿದ್ದೆ ಮಾಡಿಕೊಂಡು ಪಿಕ್ನಿಕ್ ತಾಣಕ್ಕೆ ಹೋಗಿಬಂದಂತೆ ಬರುತ್ತಾರೆ. ಅಪರಾಧಿಗಳು ಮುಂದೆ ಎಂದೂ ಇಂತಹ ತಪ್ಪು ಮಾಡಬಾರದು, ಅಥವಾ ಇಂತದ್ದೇ ಕ್ರೂರತನ ಇರುವವರಿಗೆ ಎಚ್ಚರಿಕೆಯಾಗುವಂತಹ ಕಠಿಣ ಶಿಕ್ಷೆ ನಮ್ಮ ಕಾನೂನಿನಲ್ಲಿ ಇಲ್ಲ. ಇದರಿಂದ ಅಪರಾಧ ಮಾಡಲು ಯಾರಿಗೂ ಭಯವಿಲ್ಲ.

ಆದರೆ ನಮ್ಮ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಪರಾಧ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು ಎಂದು ನಂಬುವವರು. ಇದೆ ಕಾರಣದಿಂದ, ಎರಡು ಕೊಲೆಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಜೆಡಿಎಸ್ ಜಿಲ್ಲಾ ಪಂಚಾಯತಿ ಸದಸ್ಯೆ ತೊಪ್ಪನಹಳ್ಳಿ ಲಲಿತ ಅವರ ಪತಿ ಜೆಡಿಎಸ್​ ಮುಖಂಡ ಪ್ರಕಾಶ್​ ಎಂಬುವವರನ್ನು ಹಾಡ ಹಗಲೇ ಮಾರಾಕಾಸ್ತ್ರಗಳಿಂದ ಕೊಚ್ಚು ಹಾಕಿದ ದುಷ್ಕರ್ಮಿಗಳನ್ನು ದಯೆಯಿಲ್ಲದೆ ಶೂಟ್ ಮಾಡಿ ಎಂದು ಆಕ್ರೋಶದಿಂದ ಆರ್ಡರ್ ಮಾಡಿದರು. ಕಾನೂನು ಬದ್ದವಾಗಿ ಇದು ಆಗದ ವಿಷಯವಾದರೂ, ಅಪರಾಧಿಗಳಿಗೆ ಇಂತಹ ಕಠಿಣ ಶಿಕ್ಷೆ ನೀಡಿದರೆ ಮುಂದೆ ಮತ್ತೊಬ್ಬ ಕ್ರೂರಿ ತಲೆ ಎತ್ತುವ ಮುನ್ನ ನೂರು ಬಾರಿ ಯೋಚಿಸುವಂತಾದರೂ ಆಗುತ್ತದೆ ಎಂಬ ಕುಮಾರಸ್ವಾಮಿ ಅವರ ಭಾವನೆ ದಿಟ್ಟವಾದದ್ದು ಹಾಗು ಶ್ಲಾಘಿಸಬೇಕಾದದ್ದು.

Leave a Reply