ಸಿಎಂ ಕುಮಾರಸ್ವಾಮಿ ಅವರನ್ನು ಕಾಡುತ್ತಿರುವ ಆ ವ್ಯಕ್ತಿ ಯಾರು ಗೊತ್ತಾ…?!

ರಾಜ್ಯದ ಬಹುತೇಕ ಜನರನ್ನು ತಮ್ಮ ದಿಟ್ಟ ಆಡಳಿತದಿಂದ, ಜನ ನೀಡಿರುವ ಅಧಿಕಾರವನ್ನು ಸದುಪಯೋಗ ಪಡಿಸಕೊಳ್ಳಬೇಕೆಂದು ನಿಷ್ಠೆಯಿಂದ ಕೆಲಸ ಮಾಡುತ್ತಾ, ಸಂತೃಪ್ತಿ ಪಡಿಸುತ್ತಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಒಬ್ಬ ವ್ಯಕ್ತಿಯನ್ನು ತೃಪ್ತಿ ಪಡಿಸಲು ಆಗುತ್ತಿಲ್ಲ. ಆ ವ್ಯಕ್ತಿ ಕುಮಾರಸ್ವಾಮಿ ಅವರಿಗೆ ದೊಡ್ಡ ತಲೆ ನೊವ್ವಾಗಿ ಬಿಟ್ಟಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಮುಂದೆ ಓದಿ…

ಇಂದು ವಿಜಯಪುರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಹಾವಿನಾಳ ಗ್ರಾಮದ ನಿವಾಸಿ ಕಾಶಿನಾಥ್ ಬನಸೋಡೆ  ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಿಎಂ ಅವರ ಕಾಲಿಗೆ ಬಿದ್ದು ‘ನಾನೊಬ್ಬ ಅನಾಥ ನನ್ನ ಬಳಿ ಹಣವಿಲ್ಲ, 63 ಸಾವಿರ ರೂ. ಕಬ್ಬಿನ ಹಣ ಹಾಗೂ ಸ್ವಲ್ಪ ಹಣ ಆಸ್ಪತ್ರೆಗೆ ಬೇಕು. ಅದಕ್ಕೆ ನನಗೆ 1 ಲಕ್ಷ ರೂ. ಸಾಲ ಕೊಡಿಸಿ ಅದನ್ನು ಹಾಳುಮಾಡಲ್ಲ’ ಎಂದು ಕೇಳಿಕೊಂಡರು. ಆಗ ಏಕಾಏಕಿ ಪ್ರಜೆಗಳೊಂದಿಗೆ ಸದಾ ಸೌಮ್ಯವಾಗಿ ಮಾತಾನಾಡುವ ಕುಮಾರಸ್ವಾಮಿ ಅವರು ‘ ಈತ ಕಳ್ಳ ಆಸಾಮಿ… ‘ ಎಂದು ಗದರಿದರು. ಎಲ್ಲಾ ಜನರು ಆಶ್ಚರ್ಯದಿಂದ ಕುಮಾರಸ್ವಾಮಿ ಅವರತ್ತ ನೋಡಿದಾಗ ಅವರು ‘ ಈತ ಕಳ್ಳ ಆಸಾಮಿ, 50 ಬಾರಿ ನನ್ನ ಬಳಿ ಬಂದಿದ್ದಾನೆ. ಪ್ರತಿ ಸಾರಿ ಹಣ ಕೊಟ್ಟು ಕಳುಹಿಸಿದ್ದೇನೆ. ಅಲ್ಲದೆ ಮತ್ತೆ ಈಗ ಬಂದಿದ್ದಾನೆ ‘ ಎಂದು ಹೇಳಿದರು. ನಂತರ ಈ ವಿಚಾರದ ಕುರಿತು ನೋಡುತ್ತೇವೆ ಎಂದು ಅಧಿಕಾರಿಗಳು ಕಾಶಿನಾಥ್ ನನ್ನು ಸಮಾಧಾನಪಡಿಸಿ ಸಭೆಯಿಂದ ಕಳುಹಿಸಿಲಾಯಿತು.

ಈತನ ಬಗ್ಗೆ ಹೇಳಿದ ಸ್ಥಳೀಯರು ‘ ಕಾಶಿನಾಥ ಒಮ್ಮೆ ಬೆನ್ನಿಗೆ ಬಿದ್ದರೆ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಅವರು ಹಲವು ಬಾರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಾಕಷ್ಟು ಹಣ ಪಡೆದುಕೊಂಡು ಬಂದಿದ್ದಾರೆ. ನಮ್ಮ ಬಳಿಯೂ ಸದಾ ಸಾಲ ಕೇಳುತ್ತಾನೆ’ ಎಂದು ಕುಮಾರಸ್ವಾಮಿ ಅವರ ಬೆನ್ನಿಗೆ ಬೇತಾಳನಂತೆ ಬಿದ್ದು ಕಾಡುತ್ತಿರುವ ಕಾಶಿನಾಥ್ ಬಂಡವಾಳ ಬಯಲು ಮಾಡಿದರು.

ಒಬ್ಬ ವ್ಯಕ್ತಿ ಜನರ ಕಷ್ಟಕ್ಕೆ ಪರಿಹಾರ ಮಾಡಲು ಇಂತಹ ಒಳ್ಳೆ ಕಾರ್ಯಗಳನ್ನು ಮಾಡುತ್ತಿರುವಾಗ, ನಾವು ಅದನ್ನು ಸದುಪಯೋಗ ಪಡೆಸಿಕೊಳ್ಳ ಬೇಕೇ ಹೊರೆತು, ಹೀಗೆ ದುರುಪಯೋಗ ಪಡೆದುಕೊಳ್ಳಲು ಪ್ರಯತ್ನಿಸಬಾರದು.

Leave a Reply