ಕುಮಾರಸ್ವಾಮಿ ಅವರು ಕ್ಷಮೆ ಕೇಳಬೇಕು ಎಂದು ಹೇಳಿದ ಯಡಿಯೂರಪ್ಪನಿಗೆ ರಾಜ್ಯದ ಜನರಿಂದ ಬಾರಿ ಟೀಕೆ…!

ಜೆಡಿಎಸ್ ನಾಯಕ ಪ್ರಕಾಶ್ ಎಂಬುವರ ಕೊಲೆ ಸುದ್ದಿ ಕೇಳಿದಾಗ ಸಿಎಂ ಕುಮಾರಸ್ವಾಮಿ ಅವರು ಆಕ್ರೋಶಭರಿತರಾಗಿ ‘ ಅವರು ತುಂಬಾ ಒಳ್ಳೆ ಮನುಷ್ಯ, ಅಪರಾಧಿಗಳನ್ನು ಶೂಟ್ ಔಟ್ ಮಾಡಿ’ ಎಂದು ಹೇಳಿದ ವಿಡಿಯೋ ಬಹಳಷ್ಟು ಚರ್ಚೆಗೆ ಗುರಿಯಾಯಿತು. ರಾಜ್ಯದ ಜನರು, ಕುಮಾರಸ್ವಾಮಿ ಅವರ ಮಾತು ಸರಿ ಇದೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಲೇ ಬೇಕು. ನಮ್ಮ ಬೆಂಬಲ ನಿಮ್ಮೊಂದಿಗೆ ಇದೆ ಎಂದು ಪ್ರೋತ್ಸಾಹಿಸಿದರು. ಅಲ್ಲದೆ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ‘ ಕುಮಾರಸ್ವಾಮಿ ಅವರ ಮಾತು ತಪ್ಪು. ಅವರು ಕ್ಷಮೆ ಕೇಳಬೇಕು’ಎಂದು ಹೇಳಿಕೆ ನೀಡಿದರಿಂದ ರಾಜ್ಯದ ಜನತೆ ಛೀಮಾರಿ ಹಾಕಿ ಚಳಿ ಬಿಡಿಸಿದ್ದಾರೆ. ‘ಕುಮಾರಸ್ವಾಮಿ ಅವರು ಹೇಳುತ್ತಿರುವುದು ಅಪರಾಧಿಗಳನ್ನು ಶೂಟ್ ಮಾಡಲಿ ಎಂದು, ನಿಮ್ಮ ತರ ಸಹಾಯ ಕೋರಿ ಬಂದ ಮುಗ್ದ ರೈತರ ಮೇಲಲ್ಲ’ ಎಂದು ಯಡಿಯೂರಪ್ಪನವರು 2008 ರಲ್ಲಿ ಗೋಲಿಬಾರ್ ಮಾಡಿಸಿ ರೈತರ ಹತ್ಯೆ ಮಾಡಿಸಿದ ಘಟನೆ ಬಗ್ಗೆ ಟೀಕಿಸಿದರು.

ರಾಜ್ಯದ ಜನರು ಕುಮಾರಸ್ವಾಮಿ ಅವರು ಹೇಳಿದಂತೆ, ಅಪರಾಧಿಗಳಿಗೆ ಕಾನೂನಿನಲ್ಲಿ ಅಂತಹ ಕಠಿಣ ಶಿಕ್ಷೆ ವಿಧಿಸುವಂತೆ ಇದಿದ್ದರೆ ಎಷ್ಟೋ ಚೆನ್ನಾಗಿ ಇರುತ್ತಿತ್ತು. ಆದರೆ ನಮ್ಮ ಕಾನೂನಿನ ಚೌಕಟ್ಟಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂಬುದು ಬೇಸರದ ಸಂಗತಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ತೊಪ್ಪನಹಳ್ಳಿಯಲ್ಲಿ ಮೃತ ಪ್ರಕಾಶ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ‘ ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಾಗಿಲ್ಲ. ಒಬ್ಬ ಪ್ರಜೆಯಾಗಿ ಬಹಳ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಕೊಲೆ ಮಾಡುವ ಹಂತಕರು ಜಾಮೀನು ಪಡೆದು ಸಲೀಸಾಗಿ ಜೈಲಿನಿಂದ ಆಚೆ ಬರುತ್ತಾರೆ. ಈ ರೀತಿಯ ಕಾನೂನು ವ್ಯವಸ್ಥೆ ನಮ್ಮಲಿದೆ…’ ಎಂದು ಬೇಸರದಿಂದ ಮಾತನಾಡಿದರು.

Leave a Reply