‘ಮೋದಿ..ಮೋದಿ..’ಎಂದು ಜಪಿಸುತ್ತಿದ್ದ ಬಾಬ ರಾಮ್ ದೇವ್ ಉಲ್ಟಾ ಹೊಡೆದರ…!?

ಬಿಜೆಪಿ ಪಕ್ಷ ಕೇಂದ್ರದಲ್ಲಿ ಆಡಳಿತಕ್ಕೆ ಬಂದಾಗಲಿನಿಂದಲೂ ಅಂಬಾನಿ, ಅಡಾಣಿ ಇಂತವರ ಕಷ್ಟಕ್ಕೆ ಹಾಗು ಇವರ ವ್ಯಾಪಾರವನ್ನು ವೃದ್ಧಿ ಮಾಡುವ ಪ್ರಧಾನಿಯಾಗಿ ಅವರ ಬೆಂಬಲ ಗಳಿಸಿದ್ದಾರೆ ಹೊರೆತು, ಜನರ ಕಷ್ಟಕ್ಕೆ ಸ್ಪಂದಿಸುವ ಪ್ರಧಾನಿಯಾಗಿಲ್ಲ ಎಂದು ದೇಶದ ಜನತೆ ಬೇಸರ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಆದರೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿದೆ ಕಾರಣ ಈಗ ಎಲ್ಲ ದೊಡ್ಡ ವ್ಯಕ್ತಿಯರು ಮೋದಿ ಇಂದ ನಿಧಾನವಾಗಿ ತಮ್ಮ ಬೆಂಬಲ ಹಿಂಪಡೆಯುತ್ತಿದ್ದಾರೆ.

ಪತಾಂಜಲಿ ಸಂಸ್ಥೆಯ ಸ್ಥಾಪಕ ಬಾಬಾ ರಾಮ್ ದೇವ್ ಅವರು ತಮ್ಮ ಕಂಪನಿ ಶುರು ಮಾಡಿದಾಗಲಿನಿಂದಲೂ ಮೋದಿ ಅವರು ಅದಕ್ಕೆ ತಮ್ಮದೇ ಕಂಪನಿ ಎನ್ನುವ ರೀತಿ ಬೆಂಬಲಿಸುತ್ತಾ ಬಂದಿದ್ದರು, ಸಹಜವಾಗಿಯೇ ಮೋದಿ ಹಾಗು ಬಾಬಾ ರಾಮ್ ದೇವ್ ಅವರ ನಡುವೆ ಸ್ನೇಹ ಬೆಳೆದಿತ್ತು. ಆದರೆ ಈ ಸ್ನೇಹ ಕೇವಲ ಸ್ವಾರ್ಥದ್ದು ಎಂಬುದು ಮೋದಿ ಅವರಿಗೆ ಗೊತ್ತಿರಲಿಲ್ಲ. ಯಾವಾಗ ಜನರು ಮೋದಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡರೋ, ಆಗ ಮೋದಿಯ ಜನಪ್ರಿಯತ ಕೂಡ ಕುಗ್ಗುತ್ತಾ ಬಂತು. ಅದರ ಪ್ರತ್ಯಕ್ಷ ಸಾಕ್ಷಿಯೇ ಪಂಚ ರಾಜ್ಯಗಳ ಚುನಾವಣೆಯ ಸೋಲು. ಇದರ ಪರಿಣಾಮವಾಗಿ, ನಮ್ಮ ದೇಶದ ಪ್ರಬಲ ವ್ಯಕ್ತಿಗಳು, ಅಂದರೆ ಮೋದಿಯ ‘ ತಾತ್ಕಾಲಿಕ ಸ್ನೇಹಿತರು’ ಮೋದಿಯಿಂದ ದೂರ ಸರಿಯುತ್ತಿದ್ದಾರೆ.

ಸದಾ ಮೋದಿ ಮೋದಿ ಎಂದು ಜಪ ಮಾಡುತ್ತಿದ್ದ ವ್ಯಕ್ತಿಗಳೇ, ಈಗ ಮೋದಿ ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲುವುದು ಸಂಶಯ ಎಂದು ಹೇಳಿಯುತ್ತಿದ್ದರೆ. ಬಾಬಾ ರಾಮ್ ದೇವ್ ಅವರು ಕೂಡ ಸಂದರ್ಶನ ಒಂದರಲ್ಲಿ, ಮೋದಿ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಹೇಳಿದ್ದಾರೆ.

ಬಹುಷಃ ಮೋದಿ ಕೇವಲ ತಮ್ಮ ಸ್ವಾರ್ಥಕ್ಕಾಗಿ ಬೆಂಬಲಿಸುವ ಪ್ರಬಲ ವ್ಯಕ್ತಿಗಳನ್ನು ಮೆಚ್ಚಿಸುವದರಲ್ಲಿ ತಮ್ಮ ಕಾಲಹರಣ ಮಾಡುವ ಬದಲು, ದೇಶದ ಪ್ರಗತಿಗಾಗಿ ದುಡಿದಿದ್ದರೆ, ಜನ ಈ ಬಾರಿಯೂ ಮೋದಿಯನ್ನು ಬೆಂಬಲಿಸುತ್ತಿದ್ದರು.

Leave a Reply