90 ಕೋಟಿ ಹಗರಣದಲ್ಲಿ ಸಿಕ್ಕಿಬಿದ್ದ ಶೋಭಾ ಕರಂದ್ಲಾಜೆ…! ಜೈಲು ಸೇರುತ್ತಾರೆ ಶೋಭಕ್ಕ ..?

ಸಂಸದೆ ಶೋಭಾಕರಂದ್ಲಾಜೆ ಅವರು ಇಂಧನ ಸಚಿವರಾಗಿದ್ದ ವೇಳೆ ಬೆಸ್ಕಾಂನಲ್ಲಿ 90 ಕೋಟಿ ರೂ. ಹಗರಣ ನಡೆಸಿದ್ದಾರೆ ಸಿಕ್ಕಿಬಿದಿದ್ದಾರೆ . 2012-13ನೇ ಸಾಲಿನಲ್ಲಿ ಎಬಿ-ಎಲ್‍ಟಿ, ಎಬಿ-ಎಚ್‍ಟಿ, ಬಂಜ್ ಕೇಬಲ್ ಕಾಮಗಾರಿಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆಸಲಾಗಿದೆ. ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್, ಕನೆಕ್ಟರ್ ಸ್ವಿಚ್ ಖರೀದಿಯಲ್ಲೂ ಭಾರೀ ಗೋಲ್ ಮಾಲ್ ನಡೆದಿದೆ ಎಂದು ದೂರು ದಾಖಲಾಗಿದೆ.

ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಒಂದರ ಮಾರುಕಟ್ಟೆ ದರ 800 ರೂ. , ಬೆಸ್ಕಾಂ ನಿರ್ಧರಿಸಿದ ದರ 1987ರೂ. ಆದರೆ ಖರೀದಿ ಮಾಡಿರುವುದು 6000 ರೂ.ಗಳಿಗೆ. ಈ ಮೂಲಕ ಸಾಕಷ್ಟು ಹಣ ಗುಳುಂ ಆಗಿದೆ ಎಂದು ತಿಳಿದುಬಂದಿದೆ . 49000 ಕನೆಕ್ಟರ್ ಖರೀದಿಯಲ್ಲಿಯೂ ಅಕ್ರಮ ಎಸಗಲಾಗಿದೆ. ಒಂದು ಕನೆಕ್ಟರ್‍ನ ಮಾರುಕಟ್ಟೆ ದರ 80 ರೂ. ಬೆಸ್ಕಾಂ ನಿಗದಿ ಮಾಡಿದ್ದು 152 ರೂ. ಆದರೆ ಖರೀದಿಯಾಗಿರುವುದು 855ರೂ.ಗಳಿಗೆ ಎಂದಿದ್ದಾರೆ.

ಕೂಲಿ ನೀಡುವುದರಲ್ಲಿಯೂ ಏಷ್ಯನ್ ಫ್ಯಾಬ್ ಟೆಕ್ ಲಿಮಿಟೆಡ್ ಕಂಪನಿ ಮೋಸ ಮಾಡಿದೆ. ಈ ಸಂಬಂಧ ಶೋಭಾ ಕರಂದ್ಲಾಜೆ ಸೇರಿದಂತೆ 12 ಮಂದಿ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ ಎಂದು ಜಯನ್ ತಿಳಿಸಿದ್ದಾರೆ. 

Leave a Reply