ಟಿವಿ ಪ್ರಿಯರಿಗೆ ಕೊನೆಗೂ ನೆಮ್ಮದಿಯ ಸುದ್ದಿ…!

ಡಿಸೆಂಬರ್ 29ರ ನಂತ್ರ ಹೊಸ ಕೇಬಲ್ ನೀತಿ ಜಾರಿಗೆ ಬರಲಿದೆ. ಆದ್ರೆ ಹೊಸ ಕೇಬಲ್ ನೀತಿ ಬಗ್ಗೆ ಅನೇಕ ಊಹಾಪೋಹಗಳು ಕೇಳಿ ಬಂದಿವೆ. ಡಿಸೆಂಬರ್ 29ರ ನಂತ್ರ ಟಿವಿ ಚಾನೆಲ್ ಪ್ರಸಾರದಲ್ಲಿ ವ್ಯತ್ಯಯವಾಗಲಿದೆ ಎಂಬ ಸುದ್ದಿ ಹರಿದಾಡ್ತಿದೆ. ಆದ್ರೆ ಹೊಸ ನೀತಿಯಿಂದ ಚಾನೆಲ್ ಪ್ರಸಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲವೆಂದು ಟ್ರಾಯ್ ಸ್ಪಷ್ಟಪಡಿಸಿದೆ.

ಬುಧವಾರ ಟ್ವಿಟ್ ಮಾಡಿರುವ ಟ್ರಾಯ್, ಹೊಸ ನೀತಿ ಬಗ್ಗೆ ಸ್ಪಷ್ಟನೆ ನೀಡಿದೆ. ಡಿಸೆಂಬರ್ 29ರ ನಂತ್ರ ನಿಯಮದಲ್ಲಿ ಬದಲಾವಣೆಯಾಗಲಿದೆ. ಆದ್ರೆ ಯಾವುದೇ ಟಿವಿ ರದ್ದಾಗುವುದಿಲ್ಲ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲವೆಂದು ಟ್ರಾಯ್ ಹೇಳಿದೆ.

ಹೊಸ ನಿಯಮಕ್ಕೆ ಹೊಂದಿಕೊಳ್ಳಲು ಗ್ರಾಹಕರಿಗೆ ಕೆಲ ಸಮಯಬೇಕು ಎಂದು ಟ್ರಾಯ್ ತಿಳಿಸಿದೆ. ಕೇಬಲ್ ಹೊಸ ನಿಯಮದ ಪ್ರಕಾರ ತಿಂಗಳ ಮೊದಲೇ ಗ್ರಾಹಕರು ತಮಗೆ ಬೇಕಾದ ಟಿವಿ ಚಾನೆಲ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ನೀವು ಹಣ ಪಾವತಿ ಮಾಡಿದ ಚಾನೆಲ್ ಗಳು ಮಾತ್ರ ನಿಮಗೆ ಲಭ್ಯವಾಗಲಿವೆ. ಈಗಾಗಲೇ ಕೇಬಲ್ ಸಂಸ್ಥೆಗಳು ಯಾವ ಯಾವ ಚಾನೆಲ್ ಗೆ ಎಷ್ಟು ದರ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಚಾನೆಲ್ ಗಳು ದರವನ್ನು ಪ್ರಸಾರ ಮಾಡ್ತಿವೆ.

Leave a Reply