ಅವರ ಬಿಟ್ಟು ಇವರ ಬಿಟ್ಟು ಇನ್ನ್ಯಾರು…?

ನೋಡು ನೋಡತ್ತಲೇ ಐದು ವರ್ಷದ ಹಿಂದೆ ನಮ್ಮ ಮನೆಗೆ ತಮಗೆ ಮತ ನೀಡುವಂತೆ ಬೇಡುತ್ತ ಬಂದಿದ್ದ ಲೋಕ ಸಭಾ ಅಭ್ಯರ್ಥಿಗಳನ್ನು ಮತ್ತೆ ಭೇಟಿ ಮಾಡುವ ಭಾಗ್ಯ ದೊರಕಿದೆ. ಹೌದು, ನಾಲ್ಕು ವರ್ಷಗಳ ಹಿಂದೆ ಬಾರಿ ಜನಪ್ರಿಯತೆ ಗಳಿಸಿ, ದೇಶದಲ್ಲಿ ಏನೋ ಬದಲಾವಣೆ ತಂದೆ ತರುತ್ತಾರೆ ಎಂಬ ನಂಬಿಕೆ ಎಲ್ಲರ ಮನದಲ್ಲಿ ಬಿತ್ತರಿಸಿ, ಬಹುಮತದಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿ ಮುಗಿಯುತ್ತ ಬಂದಿದೆ. ಆದರೆ ಅವರು ನೀಡಿದ ಶೇ. 80 ರಷ್ಟು ಭರವಸೆಗಳು ಕೇವಲ ಭಾಷಣಗಳಲ್ಲೇ ಉಳಿದು ಹೋಗಿದೆ ಎಂಬುದು ಅಕ್ಷರಶಃ ಸತ್ಯ. ಆದ್ದರಿಂದ ಪುನಃ ಅದೇ ತಂತ್ರಗಳನ್ನು ಉಪಯೋಗಿಸಿ ಮತ್ತೆ ಪ್ರಜೆಗಳನ್ನು ಹರಕೆ ಕುರಿಗಳನ್ನಾಗಿ ಮಾಡಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಅಸಾಧ್ಯ ಎಂದು ಅವರಿಗೂ ತಿಳಿದೇ ಇದೆ. ಇದರಿಂದ ಅವರು ಹೊಸ ತಂತ್ರವೊಂದನ್ನೇ ರೂಪಿಸಿಕೊಂಡಿದ್ದಾರೆ. ಅದೇನೆಂದರೆ, ಮೋದಿ ಬಿಟ್ಟರೆ ದೇಶದ ಪ್ರಧಾನಿ ಹುದ್ದೆಗೆ ಪರ್ಯಾಯ ಯಾರು ಇಲ್ಲ, ಅಥವಾ ಮೋದಿಯನ್ನು ಮೀರಿಸುವ ನಾಯಕತ್ವ, ದಿಟ್ಟತನ ಅಥವಾ ದೂರ ದೃಷ್ಟಿ ಇನ್ಯಾರಿಗೂ ಇಲ್ಲ ಎಂಬುದನ್ನು ಬಲವಾಗಿ ಪ್ರಜೆಗಳ ಮನದಲ್ಲಿ ಬೇರು ಬಿಡಿಸಲು ಪ್ರಯತ್ನಿಸುತ್ತಿದ್ದಾರೆ. ಮೋದಿ ಪ್ರಧಾನಿಯಾಗಿ ದೇಶದಲ್ಲಿ ಏನೇನು ಬದಲಾವಣೆ ತರುತ್ತೇನೆ ಎಂದು ಭರವಸೆ ನೀಡಿದ್ದರೋ, ಅದರ ಅರ್ಧದಷ್ಟೂ ಮಾಡುವುದರಲ್ಲಿ ಸಫಲರಾಗಿಲ್ಲ ಎಂಬುದು ಎಷ್ಟು ಸತ್ಯವೋ, ಮೋದಿ ಅವರಿಗೆ ಪರ್ಯಾಯವಾಗಿ ಅನ್ನುವುದಕ್ಕಿಂತ ಮೋದಿ ಅವರಿಗಿಂತ್ತಲೂ ಉತ್ತಮ ಪ್ರಧಾನಿ ಅಭ್ಯರ್ಥಿಗಳು, ನಮ್ಮ ದೇಶದಲ್ಲಿ ಇದ್ದಾರೆ ಎಂಬುದು ಅಷ್ಟೇ ಸತ್ಯ. ಒಬ್ಬ ಪರಿಪೂರ್ಣ ನಾಯಕ ಸೂಕ್ತ ನಿರ್ದೇಶನದಿಂದ ಅಧೀನರ ಆಲೋಚನೆ ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರುವ ವ್ಯಕ್ತಿಯಾಗಿರಬೇಕು. ಒಬ್ಬ ಉತ್ತಮ ನಾಯಕನಿಗೆ ಪ್ರಾಮಾಣಿಕತೆ, ಅಧಿಕಾರ ನೀಡುವ ಸಾಮರ್ಥ್ಯ, ಸಂವಹನ, ದೃಢ ವಿಶ್ವಾಸ, ಧೈರ್ಯ, ಔದಾರ್ಯತೆ, ನಿರ್ವಹಣಾ ಕಲೆ, ಸಕಾರಾತ್ಮಕ ಭಾವನೆಗಳಂತ ಹಲವಾರು ಗುಣಗಳು ಇರಬೇಕು. ಇದರಲ್ಲಿ ಶೇ 80 ರಷ್ಟು ಗುಣಗಳು ಇದ್ದರು, ಅವರನ್ನು ಒಬ್ಬ ಪ್ರಧಾನಿ ಅಭ್ಯರ್ಥಿ ಎಂದು ಪರಿಗಣಿಸಬಹುದು. ಹಾಗಾದರೆ ಇಂತಹ ನಾಯಕರು ಯಾರಿದ್ದಾರೆ ? ಮುಂದೆ ಓದಿ…

 • ನಿತಿನ್ ಗಡ್ಕರಿ : ನಿತಿನ್ ಗಡ್ಕರಿ ಒಬ್ಬ ಹಿರಿಯ ರಾಜಕಾರಣಿ ಆದ್ದರಿಂದ ಬಹಳ ಅನುಭವ ಉಳ್ಳುವವರು ಹಾಗು ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಕಿಚ್ಚು ಇರುವವರು. ಇವರ ಜನಪ್ರಿಯತೆಯು ಕೂಡ ಯಾರಿಗೂ ಕಮ್ಮಿ ಇಲ್ಲದಿರುವ ಕಾರಣ, ಇವರು ಒಬ್ಬ ಒಳ್ಳೆಯ ಪ್ರಧಾನಿ ಅಭ್ಯರ್ಥಿ ಎಂಬುವುದು ಸುಳ್ಳಲ್ಲ.
 • ರಾಜ್ಯವರ್ಧನ್ ಸಿಂಗ್ ರಾಥೋಡ್ : ಮಾಜಿ ಒಲಂಪಿಕ್ ಕ್ರೀಡಾ ಪಟು ರಾಜ್ಯವರ್ಧನ್ ಸಿಂಗ್ ರಾಥೋಡ್ ದಿಟ್ಟ ವ್ಯಕ್ತಿತ್ವ ಹಾಗು ಮುಂದಾಳತ್ವದ ಗುಣಗಳುನ್ನು ಹೊಂದಿರುವ ನಾಯಕ. ಅಲ್ಲದೆ ಇವರು ವಯಸ್ಸು ಕೂಡ ಚಿಕ್ಕದ್ದಾದ್ದರಿಂದ, ಮೋದಿ ಇವರನ್ನು ಮಾರ್ಗದರ್ಶಕರ ಮಂಡಳಿಗೆ ದೂಡಲು ಸಾಧ್ಯವಿಲ್ಲ.
 • ಎಚ್.ಡಿ ದೇವೇಗೌಡ : ವಯಸ್ಸು 80 ದಾಟಿದ್ದರು ಇನ್ನೂ ಈಗ ತಾನೇ ರಾಜಕೀಯಕ್ಕೆ ಕಾಲಿಟ್ಟಿರುವಂತೆ, ರಾಜ್ಯ ರಾಜಕೀಯದಲ್ಲಿ ಬಹಳ ಸಕ್ರಿಯರಾಗಿರುವ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಈಗಾಗಲೇ, ಪ್ರಧಾನಿ ಹುದ್ದೆಯನ್ನು ಸಫಲವಾಗಿ ನಿರ್ವಹಿಸಿರುವ ಅನುಭವ, ಹಾಗು 60ಕ್ಕೂ ಹೆಚ್ಚು ವರ್ಷಗಳ ಕಾಲ ಜನಸೇವೆ ಮಾಡಿರುವುದರಿಂದ, ಜನರ ಹಿತಾಸಕ್ತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ನಾಯಕ. ಅಲ್ಲದೆ ಇವರಿಗೆ ಅಧಿಕಾರದ ವ್ಯಾಮೋಹ ಇಲ್ಲದಿರುವ ಕಾರಣ, ಜನಸೇವೆ ಮಾಡುವ ಕಿಚ್ಚು ಎಂದಿಗೂ ಇವರಿಂದ ಹೋಗುವುದಿಲ್ಲ. ಆದ್ದರಿಂದ ಇವರು ಸಹ ಪ್ರಧಾನಿ ಹುದ್ದೆಗೆ ಒಬ್ಬ ಪರಿಪೂರ್ಣ ಅಭ್ಯರ್ಥಿ.
 • ಶಶಿ ತರೂರ್ :     ಉತ್ತಮ ಲೇಖಕ, ಅಂಕಣಕಾರ, ಪತ್ರಕರ್ತ, ಪ್ರತಿಪಾದಿಸುವ ಹಾಗೂ ಪರೋಪಕಾರಿಗುಣ ಉಳ್ಳವ ಶಶಿ ತರೂರ್ ಅವರ ಖಾಸಗಿ ಜೀವನದ ವಿವಾಧಗಳ ಆಧಾರದ ಮೇಲೆ ಅವರ ಸಾಮರ್ಥ್ಯವನ್ನು ಅಳಿಯುವುದು ಸರಿಯಲ್ಲ. ಎಷ್ಟೇ ಆದರೂ ಮೋದಿ ಕಾಸಗಿ ಜೀವನ ಜನರಿಗೆ ಇನ್ನೂ ಚಂದಮಾಮ ಕತೆಯಾಗಿಯೇ ಉಳಿದಿದೆ. ಇದರಿಂದ ನಮ್ಮ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರನ್ನು ಸೇರಿಸಿಕೊಳ್ಳ ಬಹುದು.
 • ಚಂದ್ರಬಾಬು ನಾಯ್ಡು : ದೇಶದ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಚಂದ್ರಬಾಬು ನಾಯ್ಡು ಅವರ ನೇತೃತ್ವದ ತೆಲಂಗಾಣ ಸರ್ಕಾರವು ಉತ್ತಮ ಅಭಿವೃದ್ಧಿಯ ಪಥದಲ್ಲಿದೆ. ಆದ್ದರಿಂದ ಇವರು ಕೂಡ ಒಬ್ಬ ಉತ್ತಮ ಅಭ್ಯರ್ಥಿಯೆಂದೇ ಹೇಳಬಹುದು.

ಹೀಗೆ ಹುಡುಕುತ್ತ ಹೋದರೆ ಮೋದಿಗಿಂತಲೂ ಹಲವು ಪಟ್ಟು ಉತ್ತಮ ನಾಯಕರು ನಮ್ಮ ದೇಶದಲ್ಲಿ ಇದ್ದಾರೆ. ಆದ್ದರಿಂದ ಈ ಬರಿ ನಾವು ಮತ್ತೆ ಹರಕೆ ಕುರಿಯಾಗದೆ, ಸೂಕ್ತವಾದ, ನಮ್ಮ ಆಲೋಚನೆಗೆ ಸರಿ ತೂಗುವಂತಹ ಅಭ್ಯರ್ಥಿಗಳಿಗೆ ಮತ ನೀಡಿ, ಬಿಜೆಪಿ ಸರ್ಕಾರದಿಂದ ಹಳಿ ಬಿಟ್ಟಿರುವ ರೈಲಿನಂತೆ ಆಗಿರುವ ನಮ್ಮ ದೇಶವನ್ನು ದುರಸ್ತಿಗೊಳಿಸೋಣ.

One thought on “ಅವರ ಬಿಟ್ಟು ಇವರ ಬಿಟ್ಟು ಇನ್ನ್ಯಾರು…?

 1. Tho Nim janmakke
  Shashi tharoor. Paakigala enjalu nekko gulama

  Devegowda kutumba kalyana mathrave avrige gotthirodu anubhava irodu

  Chandrababu. Waste fellow

  Nithin gadkari 50% ok
  E listnalliroru. Modi kaalina ungustakku sama illa

Leave a Reply