IPS ಡಿ. ರೂಪ ಅವರ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಬಾರಿ ವಂಚನೆ…!

ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಉಪಯೋಗಗಳಿವೆಯೋ ಅದಕ್ಕಿಂತ ದುರಪಯೋಗಗಳೇ
ಹೆಚ್ಚು ಇದೆ. ನಕಲಿ ಆನ್ಲೈನ್ ಮಾರುಕಟ್ಟೆಗಳು ಅಥವಾ ಜನಪ್ರಿಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಸಮಾಜ ಕಲ್ಯಾಣಕ್ಕೆಂದು ಜನರಿಂದ ಹಣ ಪಡೆಯುವ ದುಷ್ಕರ್ಮಿಗಳ ಅಡ್ಡ ಸಾಮಾಜಿಕ ಜಾಲತಾಣವಾಗಿದೆ.

ಇದೇ ರೀತಿ ಈಗ IPS ಅಧಿಕಾರಿ ಡಿ. ರೂಪ ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆಯೊಂದನ್ನು ತೆರೆದು ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಂದು ಸುಳ್ಳು ಪ್ರಚಾರ ಮಾಡಿ ಚಂದ ವಸೂಲಿ ಮಾಡಿರುವ ದೊಡ್ಡ ವಂಚನೆ ಈಗ ಬೆಳಕಿಗೆ ಬಂದಿದೆ.
ನೂರಾರು ಮಂದಿ ರೂಪಾ ಅವರ ಹೆಸರಿನಲ್ಲಿ ವಿಶ್ವಾಸವಿರಿಸಿ ಆನ್‌ಲೈನ್‌ ಮೂಲಕವೇ ಹಣ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.

ಈ ವಿಚಾರ ರೂಪಾ ಅವರ ಗಮನಕ್ಕೆ ಬಂದ ಬಳಿಕ ಟ್ವೀಟ್‌ ಮಾಡಿರುವ ಅವರು ನಾನು ಇನ್‌ಸ್ಟಾಗ್ರಾಂನಲ್ಲಿ ಇಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡುತ್ತೇನೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿರುವವರು ಈ ವಿಚಾರ ಗಮನಿಸುವಂತೆ ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ.

Leave a Reply