ಸಿಎಂ ಕುಮಾರಸ್ವಾಮಿ ಅವರ ಕನ್ನಡ ಪ್ರೇಮದ ಬಗ್ಗೆ ಪ್ರೆಶ್ನಿಸುವ ಮುನ್ನ ಇದನ್ನು ಓದಿ…!

ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಂಗ್ಲ ಮಾಧ್ಯಮ ಸರ್ಕಾರೀ ಶಾಲೆ ಆರಂಭಿಸಲು ನಿರ್ಧರಿಸಿದ್ದಾರೆ. ಈ ನಿರ್ಧಾರದಿಂದ ಕೆಲವರು ಸಿಎಂ ಅವರ ಕನ್ನಡ ಪ್ರೇಮವನ್ನು ಪ್ರೆಶ್ನಿಸುತ್ತಿದ್ದಾರೆ. ಇದು ಅವರ ಮೂರ್ಖತನದ ಪರಮಾವಧಿ ಎಂದೇ ಹೇಳಬಹುದು. ನಮ್ಮ ಭಾಷೆ ಮೇಲೆ ಪ್ರೇಮ ಅಭಿಮಾನ ಏನೇ ಇದ್ದರು, ನಮ್ಮ ರಾಜ್ಯದ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಾಗ ಆಂಗ್ಲ ಭಾಷೆ ಬಹುಮುಖ್ಯವಾಗುತ್ತದೆ.

ಇದಕ್ಕೆ ಕಾರಣ, ಆಂಗ್ಲ ಭಾಷೆ ಕನ್ನಡಕ್ಕಿಂತ ಮೇಲೆ, ಅಥವಾ ನಮ್ಮ ಕನ್ನಡ ಭಾಷೆ ಆಂಗ್ಲ ಭಾಷೆಯ ಎದುರು ಸಡಿಲ ಎಂದು ಅಲ್ಲ. ಆಂಗ್ಲ ಭಾಷೆಯನ್ನು ಬಳಕೆ ಮಾಡುವ ಜನ ಹೆಚ್ಚಿದ್ದಾರೆ, ಇದೇ ಕಾರಣದಿಂದ ಅದೊಂದು ಜಾಗತಿಕ ಭಾಷೆಯಾಗಿದೆ. ಹೀಗಾಗಿ, ನಮ್ಮ ರಾಜ್ಯದ ಮಕ್ಕಳು ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಮಕ್ಕಳು ಸಹ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಾಗ ಆಂಗ್ಲ ಭಾಷೆ ಬಹುಮುಕ್ಯವಾಗುತ್ತದೆ. ಇದೇ ಮುಂದಾಲೋಚನೆಯಿಂದ ಕುಮಾರಸ್ವಾಮಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಭಾವನೆಗಳಿಗೆ ಒಳಗಾಗಿ, ಮುಂದೆ ನಮ್ಮ ರಾಜ್ಯದ ಮಕ್ಕಳು ಕಷ್ಟ ಪಡುವ ಬದಲು, ತರ್ಕಬದ್ಧವಾಗಿ ಯೋಚಿಸಿ ಅವರ ಪ್ರಗತಿಗೆ ದಾರಿ ಮಾಡಿಕೊಡುವುದು ಉತ್ತಮ.

ಸಿಎಂ ಕುಮಾರಸ್ವಾಮಿ ಅವರು ತಮ್ಮ ಕನ್ನಡ ಪ್ರೇಮವನ್ನು, ವಿಮಾನ ನಿಲ್ದಾಣಗಳಲ್ಲಿ ಕನ್ನಡದಲ್ಲೇ ಘೋಷಣೆ ಮಾಡುವಂತೆ ಆದೇಶಿಸುವುದರ ಮೂಲಕ, ಬ್ಯಾಂಕಿಂಗ್ ಪರೀಕ್ಷೆಗಳು ಕನ್ನಡದಲ್ಲಿ ಮಾಡಲಿ ಎಂದು ಮನವಿ ಮಾಡುವ ಮೂಲಕ ಈಗಾಗಲೇ ತೋರಿದ್ದಾರೆ. ಆದರೆ ಇಂತಹ ವಿಷಯಗಲ್ಲಿ ತರ್ಕಬದ್ಧವಾಗಿ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳುವುದು ಉತ್ತಮ.

Leave a Reply