ಹೊಸ ವರ್ಷದ ಆಚರಣೆಯಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎಂಬುದು ಸಿಎಂ ಕುಮಾರಸ್ವಾಮಿ ಅವರ ಆದೇಶವಾಗಿತ್ತು…! – ಪೊಲೀಸ್ ಆಯುಕ್ತರು

ವರ್ಷಗಳು ಉರುಳುತ್ತಿದ್ದಂತೆ, ಬೆಂಗಳೂರಿನಲ್ಲಿ ವಲಸಿಗರು ಹೆಚ್ಚುತ್ತಾ ಬಂದಿದ್ದಾರೆ, ಅವರ ಪ್ರೇರಣೆಯಿಂದ, ಅವರೊಡನೆ ಸೇರಿ ಹೊಸ ವರ್ಷದಲ್ಲಿ ಹೊಸ ಹೊಸ ಮಾದಕ ವಸ್ತುಗಳನ್ನೂ ಸೇವಿಸಿ, ಬೆಂಗಳೂರು ಹೆಣ್ಣು ಮಕ್ಕಳಿಗೆ ಸುರಕ್ಷಿತ ಅಲ್ಲವೇ ಅಲ್ಲ ಎಂಬ ಕಳಂಕ ಬಂದಿತ್ತು.

ಇದನ್ನು ಹೇಗಾದರೂ ಮಾಡಿ ತಡೆಯಲೇಬೇಕು, ನಮ್ಮ ಬೆಂಗಳೂರು ನಗರಕ್ಕೆ ಅಂಟಿರುವ ಕಳಂಕವನ್ನು ಹೋಗಿಸಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡ ಸಿಎಂ ಕುಮಾರಸ್ವಾಮಿ ಅವರು, ಹೊಸ ವರ್ಷದಂದು ನಗರದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸ ಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿ, ಕಟ್ಟು ನಿಟ್ಟಾದ ಭದ್ರತೆ ಕಾಪಾಡಿಕೊಳ್ಳಲು ಹೇಳಿದ್ದರು. ಅದರ ಸಲುವಾಗಿ ಪೊಲೀಸ್ ಅಧಿಕಾರಿಗಳಿಗೆ ಈ ರೀತಿಯ ಬಿಗಿ ಭದ್ರತೆಯನ್ನು ಕಾಪಾಡಿಕೊಳ್ಳಲು ಬೇಕಾದ ವ್ಯವಸ್ಥೆಗಳಿಗೂ ಅನುಕೂಲ ಮಾಡಿಕೊಟ್ಟಿದ್ದರು.

ಇದರ ಪ್ರತಿಫಲವಾಗಿ ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಅಪರಾಧ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಹುತೇಕ ಶಾಂತಿಯುತವಾಗಿತ್ತು. ಇದಕ್ಕೆ ಎಲ್ಲ ಪೊಲೀಸರ ಶ್ರಮ ಹಾಗು ಸಿಎಂ ಅವರ ಬೆಂಬಲವೇ ಕಾರಣ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

Leave a Reply