ಕರ್ನಾಟಕ ಸರ್ಕಾರವನ್ನು ಟೀಕಿಸಿದ ಮೋದಿಗೆ ‘ದೊಡ್ಡ’ ಗೌಡರ ಟ್ವೀಟ್ ಪಂಚ್..!

ರೈತರ ಸಾಲ ಮನ್ನಾ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಧಾನಿ ಮೋದಿ ಅವರು ಲೇವಡಿ ಮಾಡಿದ್ದಾರೆ. ಅಲ್ಲದೆ 6 ತಿಂಗಳಲ್ಲಿ ಕೇವಲ 800 ರೈತರಿಗೆ ಮಾತ್ರ ಸಾಲ ಮನ್ನಾ ಆಗಿದೆ ಎಂದು ಸರಿಯಾಗಿ ಅಂಕಿ ಅಂಶವನ್ನು ತಿಳಿದುಕೊಳ್ಳದೆ ಬೇಜವಾಬ್ದಾರಿಯಿಂದ ಕರ್ನಾಟಕ ಸರ್ಕಾರದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.

ಈ ವಿಷಯದ ಕುರಿತಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ‘ಕರ್ನಾಟಕ ಸರ್ಕಾರದ ರೈತರ ಸಾಲ ಮನ್ನಾ ಯೋಜನೆಯ ಬಗ್ಗೆ ನೀವು ಮಾಡಿದ ಟೀಕೆಯನ್ನು ನಾನು ಗಮನಿಸಿದ್ದೇನೆ. ಈಗಾಗಲೇ 60 ಸಾವಿರಕ್ಕೂ ಹೆಚ್ಚು ರೈತರಿಗೆ ಹಣ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗದೆ. ನಮ್ಮ ಸರ್ಕಾರ ಕೊಟ್ಟ ಮಾತಿಗೆ ಬದ್ದವಾಗಿ ನಡೆದುಕೊಳ್ಳುತ್ತದೆ. ಮೋದಿ ಅವರೇ ನಿಮ್ಮ ತೋರು ಬೆರಳು ನಮ್ಮನ್ನು ಪ್ರಶ್ನಿಸುವಲ್ಲಿ ನಿರತವಾಗಿದ್ದರೆ, ಮಿಕ್ಕ ನಾಲ್ಕು ಬೆರಳುಗಳು ನಿಮ್ಮನ್ನೇ ನೋಟು ಅಮಾನೀಕರಣ, ಗಂಗಾ ನದಿ ಸ್ವಚ್ಛತೆ, ನದಿಗಳ ಅಂತರ್ – ಸಂಪರ್ಕ, ರಾಮ ಮಂದಿರ ಹಾಗು ಇತರ ಪೊಳ್ಳು ಭರವಸೆಗಳ ಬಗ್ಗೆ ಪ್ರಶ್ನಿಸುತ್ತಿವೆ. ದೇಶದ ಮೂಲೆ ಮೂಲೆಯಿಂದಲೂ ನ್ಯಾಯಕ್ಕಾಗಿ ದೆಹಲಿಗೆ ನಿಮ್ಮ ಬಳಿ ಬಂದ ಲಕ್ಷಾಂತರ ರೈತರನ್ನು ನೀವು ಹೇಗೆ ನಿರ್ಲಕ್ಷ್ಯ ಮಾಡಿದ್ದೀರಿ ಎಂದು ನೆನಪು ಮಾಡಿಕೊಳ್ಳಿ.’ ಟ್ವೀಟ್ ಮೂಲಕ ಮೋದಿಗೆ ತಿರುಗೇಟು ನೀಡಿದ್ದಾರೆ.

Leave a Reply