ಪುನೀತ್,ಯಶ್, ಶಿವಣ್ಣ ಮನೆ ಮೇಲೆ IT ದಾಳಿ…!


ಬೆಳ್ಳಂಬೆಳ್ಳಗೆ ಆದಾಯ ತೆರಿಗೆ ಇಲಾಖೆ ಕನ್ನಡ ಸಿನಿ ರಂಗದ ದಿಗ್ಗಜರಿಗೆ ಶಾಕ್ ನೀಡಿದೆ. ರಾಕಿಂಗ್ ಸ್ಟಾರ್ ಯಶ್ , ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವ ರಾಜಕುಮಾರ್, ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕೆಜಿಎಫ್ ಹಾಗು ರಾಜಕುಮಾರ ಸಿನಿಮಾದ ನಿರ್ಮಾಪಕ ವಿಜಯ್ ಕಿರಾಗಂದೂರ್, ದಿ ವಿಲ್ಲನ್ ಚಿತ್ರದ ನಿರ್ಮಾಪಕ ಸಿ.ಆರ್ ಮನೋಹರ್, ಸೇರಿದಂತೆ ಹಲವಾರರ ಮನೆ ಮೇಲೆ ಐಟಿ ದಾಳಿ ಮಾಡಿರುವುದು ಅಭಿಮಾನಿಗಳನ್ನು ದಂಗಾಗಿಸಿದೆ.

ಸುಮಾರು 10ಕ್ಕೂ ಹೆಚ್ಚು ಕಡೆ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದ ಪುನೀತ್ ರಾಜ್ ಕುಮಾರ್ ನಿವಾಸ, ಮಹಾಲಕ್ಷ್ಮಿ ಲೇಔಟ್‍ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ಬೆಂಗಳೂರಿನ ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸದ ಮೇಲೂ ದಾಳಿ ನಡೆದಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆ ಮೇಲೆ ಹಾಗೂ ‘ಗಜಕೇಸರಿ’, ‘ರುಸ್ತುಂ’ ನಿರ್ಮಾಪಕ ಜಯಣ್ಣ ಮನೆ ಮೇಲೂ ಐಟಿ ದಾಳಿ ನಡೆದಿದೆ. ಏಕಕಾಲದಲ್ಲಿ ರೇಡ್ ಮಾಡಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Leave a Reply