ಜೆಡಿಎಸ್ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸರಳ ರಾಜಕಾರಣಿ ವೈಎಸ್ ವಿ ದತ್ತ…!

ಗಗನದೆತ್ತರದ ಕಾಂಪೌಂಡ್ ನಲ್ಲಿ ಕಣ್ಣು ಹಾಯಿಸಿದಷ್ಟು ದೊಡ್ಡದಾಗಿ ಕಾಣುವ ಬಂಗಲೆಯನ್ನು ಕಟ್ಟಿಸಿಕೊಂಡು, ಕೈಗೆ ಒಬ್ಬ ಕಾಲಿಗೆ ಒಬ್ಬ ಆಳನ್ನು ಇಟ್ಟುಕೊಂಡು, ತನಗೆ ಮೂರು, ಮಕ್ಕಳಿಗೆ ಎರಡೆರಡು, ಹೆಂಡತಿಗೆ ಒಂದರಂತೆ ಹಲವಾರು ಐಷಾರಾಮಿ ಕಾರ್ ಗಳಲ್ಲಿ ಓಡಾಡುವ ಜೀವನಶೈಲಿ ಹೊಂದಿರುವ ರಾಜಕಾರಣಿಗಳು ಇರುವ ಕಾಲದಲ್ಲಿ, ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುವ, ಆಟೋನಲ್ಲಿ ಓಡಾಡುವ ಅತ್ಯಂತ ಸರಳ, ನಿಷ್ಠಾವಂತ, ನಿಷ್ಕಳಂಕ ರಾಜಕಾರಣಿಯನ್ನು ಎಂದಾದರೂ ನೋಡಿದ್ದೀರಾ? ಅಥವಾ ಅಂತವರ ಬಗ್ಗೆ ಕೇಳಿದ್ದೀರಾ? ಸಾಧ್ಯವಿಲ್ಲ ಬಿಡಿ. ಏಕೆಂದರೆ ಇಂತಹ ವಿಷಯಗಳನ್ನು ಜನರಿಗೆ ತೋರಿಸುವುದರಲ್ಲಿ ನಮ್ಮ ಸುದ್ದಿ ವಾಹಿನಿಗಳಿಗೂ ಆಸಕ್ತಿಯಿಲ್ಲ. ಅಷ್ಟಕ್ಕೂ ನಾವು ಮಾತನಾಡುತ್ತಿರುವುದು ಇಂದು(ಗುರುವಾರ) ಜೆಡಿಎಸ್ ಪಕ್ಷದ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೈಎಸ್ ವಿ ದತ್ತ ಅವರ ಬಗ್ಗೆ.

ಸುಮಾರು 40 ವರ್ಷಗಳ ಕಾಲ ಭೌತಶಾಸ್ತ್ರ ಮತ್ತು ಗಣಿತದ ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಉತ್ತಮ ಮೇಷ್ಟ್ರಾಗಿಯೂ ಇವರು ಖ್ಯಾತಿ ಪಡೆದವರು. ಅಷ್ಟೇ ಯಾಕೆ ಹಲವಾರು ಶಾಸಕರು ಕೂಡ ದತ್ತ ಅವರ ಬಳಿ ಕಲಿತವರಿದ್ದಾರೆ. ತಮ್ಮ ಉತ್ತಮ ವ್ಯಕ್ತಿತ್ವಕ್ಕೆ ಹೊಂದುವ ಪಕ್ಷವಾದ ಜಾತ್ಯತೀತ ಜನತ ದಳ ಪಕ್ಷಕ್ಕೆ ಸೇರಿ ದತ್ತ ಅವರು ಸಮಾಜವಾದಿಯಾಗಿ ರಾಜಕೀಯದಲ್ಲಿ ವೃತ್ತಿ ಮುಂದುವರೆಸಿದರು.

ದತ್ತ ಅವರು ೨೦೧೩ ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಶಾಸನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಿಂದೆ ವಿಧಾನ ಪರಿಶತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಜನಪ್ರತಿನಿಧಿಯಾಗಿ ಎಂಎಲ್‍ಎ, ಎಂಎಲ್ಸಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿಯೂ, ಪಕ್ಷದಲ್ಲಿ ಅಧಿಕೃತ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಡೂರು ಕ್ಷೇತ್ರದಿಂದ ೨೦೧೩ರಲ್ಲಿ ಶಾಸಕರಾಗಿ ಚುನಾಯಿತರಾದವರು ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಸ್ಥಾನ, ಎಂಎಲ್ಎ, ಎಂಎಲ್ಸಿ, ಪಕ್ಷ ವಕ್ತಾರ ಸ್ಥಾನಗಳನ್ನು ಪಡೆದಿದ್ದರು. 

ಇಂದು ಜನತ ದಳ (ಜಾತ್ಯತೀತ) ಪಕ್ಷದ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಅವರು ವೈ.ಎಸ್ ವಿ ದತ್ತ ಅವರನ್ನು ಆಯ್ಕೆ ಮಾಡಿದ್ದಾರೆ.

Leave a Reply