ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡೇ ಮಾಡುತ್ತೇನೆ…! – ಎಚ್.ಡಿ ಕುಮಾರಸ್ವಾಮಿ

‘ನನ್ನ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯವನ್ನು ದೇಶದ ಭೂಪಟದಲ್ಲಿ ನಂಬರ್ ಒನ್ ರಾಜ್ಯ ಮಾಡದಿದ್ದರೆ ರಾಜಕೀಯ ತ್ಯಜಿಸಿ, ಪಕ್ಷದ ಕಚೇರಿಯನ್ನು ಬಂದ್ ಮಾಡುವುದು ಒಳ್ಳೆಯದು.’ ಎಂದು ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಮಾತನ್ನು ಅವರು ಮಾಧ್ಯಮದ ಮುಂದೆ ಅಥವಾ ಭಾಷಣ ಮಾಡುವಾಗಲೋ ಹೇಳಿದ್ದರೆ ಅದು ಕೇವಲ ಜನರನ್ನು ಸೆಳೆಯುವುದಕ್ಕಾಗಿ ಎಲ್ಲ ರಾಜಕಾರಣಿಯರಂತೆ ಹೇಳಿದ್ದಾರೆ ಎಂದು ಮರೆತು ಬಿಡಬಹುದಿತ್ತು. ಆದರೆ ಕುಮಾರಸ್ವಾಮಿ ಅವರು ಈ ಮಾತನ್ನು ಹೇಳಿರುವುದು ಪಕ್ಷದ ಮುಖಂಡರೊಂದಿಗೆ ಚರ್ಚಿಸುವ ಸಂದರ್ಭದಲ್ಲಿ.

ಪಕ್ಕ್ಷದ ನಾಯಕರನ್ನು ರಾಜ್ಯದ ಪ್ರಗತಿಗೆ ಮತ್ತಷ್ಟು ಶ್ರಮಿಸಿಲು ಹುರಿದುಂಬಿಸಲು ಈ ಮಾತನ್ನು ಹೇಳಿದ್ದಾರೆ. ಜನರು ನಂಬಿಕೆಯಿಂದ ಈ ಅಧಿಕಾರವನ್ನು ನಮಗೆ ನೀಡಿದ್ದಾರೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ನಮ್ಮ ಕನಸಿನಂತೆ ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡೋಣ ಎಂದು ಪ್ರೇರಿಪಿಸಿದ್ದಾರೆ.

Leave a Reply