ಖಾದಿಯ ಕರೆ, ಭಾರತದ ಧ್ವನಿ – ಖಾದಿ ಉತ್ಸವ 2019


ಮಹಾತ್ಮ ಗಾಂಧಿ ಅವರು ವಿದೇಶಿ ವಸ್ತುಗಳ ವ್ಯಾಮೋಹಕ್ಕೆ ಒಳಗಾಗದೆ ಸ್ವದೇಶಿ ವಸ್ತುಗಳ ಒಳಕೆಗೆ ಉತ್ತೇಜನ ನೀಡುವ ಸಲುವಾಗಿ ಸ್ವತಃ ತಾವೇ ಚರಕದಿಂದ ನೂಲುವ ಮೂಲಕ ಪರಿಶುದ್ಧ ವಸ್ತ್ರವಾದ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಒತ್ತು ನೀಡಿದ್ದರು. ಖಾದಿ ಬಟ್ಟೆಯನ್ನು ಧರಿಸುವುದು ಗೌರವ ಸಂಕೇತ ಎಂದು ಪರಿಗಣಿಸಲಾಗಿದೆ. ಅಲ್ಲದೆ ಖಾದಿ ಮತ್ತು ಗ್ರಾಮೋದ್ಯೋಕ್ಕೆ ಉತ್ತೇಜನ ನೀಡುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವ ಜೊತೆಗೆ ಶ್ರಮಿಕ ವರ್ಗದವರಿಗೆ ಆರ್ಥಿಕವಾಗಿಯೂ ಬಲ ನೀಡಲಿದೆ. ದೇಶದಲ್ಲಿ ಸಣ್ಣ ಕೈಗಾರಿಕೆ ಉದ್ಯಮದ ದಿಕ್ಕನೇ ಬದಲಾಯಿಸುತ್ತಿರುವ ರಾಜ್ಯ ಖಾದಿ ಗ್ರಾಮೋದ್ಯೋಗದ ಅಧ್ಯಕ್ಷ, ಸಣ್ಣ ಕೈಗಾರಿಕೆ ಸಚಿ ಎಸ್.ಆರ್ ಶ್ರೀನಿವಾಸ್ ಅವರು ಈ ಕಾರ್ಯಕ್ರಮದ ರೂವಾರಿಯಾಗಲಿದ್ದಾರೆ.

‘ಖಾದಿಯ ಕರೆ, ಭಾರತದ ಧ್ವನಿ ‘ ಎಂಬ ಘೋಷ ವಾಕ್ಯದೊಂದಿಗೆ ಜನವರಿ 2ರಿಂದ ಜನವರಿ 31ರ ವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಖಾದಿ ಉತ್ಸವ ಆಯೋಜಿಸಲಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ. 

”ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉತ್ಸವ ಉದ್ಘಾಟಿಸುವರು. ಸ್ವಾತಂತ್ರ್ಯಯೋಧ ನಾಡೋಜ ಡಾ.ಪಾಟೀಲ್‌ ಪುಟ್ಟಪ್ಪ, ಎಚ್‌.ಎಸ್‌.ದೊರೆಸ್ವಾಮಿಯವರನ್ನು ಸನ್ಮಾನಿಸಲಾಗುವುದು. ನಿಫ್ಟ್‌ ಸಂಸ್ಥೆ ಯಿಂದ ಖಾದಿ ಬ್ರಾಂಡಿಂಗ್‌ ಹಾಗೂ ಇತರೆ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ,” ಎಂದು ಹೇಳಿದರು. 

”ಈ ಉತ್ಸವದಲ್ಲಿ ಸುಮಾರು 1.50 ಲಕ್ಷ ಸಾರ್ವಜನಿಕರು ಭೇಟಿ ನೀಡುವ ಸಾಧ್ಯತೆ ಇದೆ. 50 ಕೋಟಿ ರೂ. ಮೌಲ್ಯದ ವಸ್ತುಗಳು ಮಾರಾಟವಾಗುವ ನಿರೀಕ್ಷೆ ಇದೆ. ರಾಜ್ಯ ಹಾಗೂ ಹೊರ ರಾಜ್ಯದ ಒಟ್ಟು 225 ಖಾದಿ ಮತ್ತು ಗ್ರಾಮೋದ್ಯೋಗ ಮಳಿಗೆಗಳು ಭಾಗವಹಿಸುತ್ತವೆ,”ಎಂದು ಹೇಳಿದರು. 

”ಸಣ್ಣ ಕೈಗಾರಿಕೆ ಇಲಾಖೆ ವಿತರಿಸಿರುವ ಕೈಗಾರಿಕಾ ನಿವೇಶನಗಳನ್ನು ಬೇರೆಯವರಿಗೆ ಲೀಸ್‌ ನೀಡಲಾಗಿದೆ ಎಂಬ ಆರೋಪ ಪರಿಶೀಲನೆ ನಡೆಯುತ್ತಿದೆ. ಸುಮಾರು 4000 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇನ್ನೂ ಸೇಲ್‌ಡೀಡ್‌ ನೀಡಿಲ್ಲ. ಅಕ್ರಮ ನಡೆದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು. 

Leave a Reply