ಸುಳ್ಳು ಭರವಸೆ ನೀಡಿಯೇ ನಾವು ಅಧಿಕಾರಕ್ಕೆ ಬಂದಿದ್ದು…! – ನಿತಿನ್ ಗಡ್ಕರಿ ವಿಡಿಯೋ ವೈರಲ್…!

ಒಂದು ಕಡೆ ಮೋದಿ ಬೆಂಬಲಿಗರು, ಏಕೆ ನಮ್ಮ ನಾಯಕ ಅಷ್ಟೊಂದು ಭರವಸೆಗಳನ್ನು ನೀಡಿ ಈಗ ನಮಗೆ ವಂಚನೆ ಮಾಡುತ್ತಿದ್ದಾರೆ ಎಂದು ಕಂಗಾಲಾಗಿದ್ದಾರೆ, ಉಳಿದ ಜನರು ಮೋದಿಗೆ ಪ್ರಧಾನಿಯಾಗುವ ಅವಕಾಶ ನೀಡಿದ್ದು ನಮ್ಮ ಜೀವನದ ಅತಿ ದೊಡ್ಡ ತಪ್ಪು ಎಂದು ಕಿಡಿ ಕಾರುತ್ತಿದ್ದರೆ. ದೇಶದ ಜನತೆಯ ಬಗ್ಗೆ ಮೋದಿಯ ನಿರ್ಲಕ್ಷ್ಯದ ವಿರುದ್ಧ ಉರಿದು ಬೀಳುತ್ತಿರುವ ಜನರ ಆಕ್ರೋಶಕ್ಕೆ ಕೇಂದ್ರ ಸಚಿವ ನಿತಿನ್ಜ ಗಡ್ಕರಿ ಸತ್ಯದ ತುಪ್ಪ ಸುರಿದಿದ್ದಾರೆ.

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ನಾನಾ ಪಾಟೇಕರ್ ಒಂದಿಗೆ ಭಾಗವಹಿಸಿದ ನಿತಿನ್ ಗಡ್ಕರಿ ‘ನಾವು ಅಧಿಕಾರಕ್ಕೆ ಎಂದೂ ಬರುವುದಿಲ್ಲ ಎಂದು ತಿಳಿದಿತ್ತು. ಆದ್ದರಿಂದ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವಂತೆ ಪಕ್ಷದ ನಾಯಕರು ಹೇಳಿದರು. ಒಂದು ವೇಳೆ ಅಧಿಕಾರಕ್ಕೆ ಬರದಿದ್ದರೆ, ನಾವು ಅವುಗಳಿಗೆ ಜವಾಬ್ದಾರರಾಗುವುದಿಲ್ಲ . ಆದರೆ ಈಗ ಸಮಸ್ಯೆ ಏನೆಂದರೆ ಜನರು ನಮಗೆ ಅಧಿಕಾರ ನೀಡಿದ್ದಾರೆ.” ಎಂದು ಹೇಳುತ್ತಾ ನಕ್ಕ ಗಡ್ಕರಿ ” ಈಗ ಜನರು ನಮಗೆ ನಾವು ನೀಡಿದ ಆಶ್ವಾಸನೆಯನ್ನು ನೆನಪಿಸುತ್ತಾರೆ. ನಾವು ಅದಕೆಲ್ಲ ತಲೆ ಕೆಡಸಿಕೊಳ್ಳದೆ, ನಗುತ್ತ ಮುಂದೆ ಹೋಗುತ್ತೇವೆ” ಎಂದು ಮೋದಿ ಹೇಗೆ ಪ್ರಧಾನಿಯಾದರು, ಬಿಜೆಪಿ ಹೇಗೆ ಅಧಿಕಾರಕ್ಕೆ ಬಂತು ಎಂಬುದರೆ ಬಗ್ಗೆ ಹೇಳಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

Leave a Reply