ಆಯುಷ್ಮಾನ್ ಭಾರತ್ – ಲಾಜಿಕ್ ಇಲ್ಲದ ಮೋದಿ ಮ್ಯಾಜಿಕ್…!

ಮೋದಿಯ ಆಯುಷ್ಮಾನ್ ಭಾರತ್ ಯೋಜನೆ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ರಕ್ಷಾ ಕವಚ ಯೋಜನೆ ಎಂದು ಹೇಳಲಾಗಿತ್ತು. ಆದರೆ ಈ ಯೋಜನೆಯ ಫಲಾನುಭವಿಗಳಾಗಲು ಇರುವ ನಿಯಮಗಳನ್ನು ಅರಿತಮೇಲೆ ಈ ರಕ್ಷಾ ಕವಚ ಟೊಳ್ಳು ಎಂದು ಜನರಿಗೆ ಗೊತ್ತಾಗಿದೆ. ‘ಭಾಯಿ ಔರ್ ಬೆಹೆನೋ’ ಎಂದುಕೊಂಡೇ ನಾಲ್ಕೂವರೆ ವರುಷ ಕಳೆಯುವಷ್ಟರಲ್ಲಿ ಜನರು ಬಾಯಿ ಬಡೆದುಕೊಳ್ಳುವಂತೆ ಮಾಡಿರುವ ಮೋದಿ, ಅಧಿಕಾರಾವಧಿ ಮುಗಿಯುವಷ್ಟರಲ್ಲಾದರೂ ಈ ಯೋಜನೆಯ ಮೂಲಕ ಜನರಿಗೆ ಏನಾದರು ಒಳ್ಳೆಯದನ್ನು ಮಾಡುತ್ತಾರೆ ಎಂಬ ನಂಬಿಕೆ ಮೋದಿ ಬೆಂಬಲಿಗರಿಗೆ ಇತ್ತು. ಆದರೆ ಉತ್ತರ ಕುಮಾರನ ಪೌರುಷ ಓಲೆ ಮುಂದೆ, ತನ್ನ ಪೌರುಷ ಏನಿದ್ದರೂ ಕೇವಲ ಮೈಕ್ ಮುಂದೆ ಎಂದು ಮೋದಿ ಮತ್ತೆ ನಿರೂಪಿಸಿದ್ದಾರೆ.

ಅಯುಷ್ಮಾನ್ ಭಾರತ್ ಯೋಜನೆ ಯಾವೊಬ್ಬ ಮಧ್ಯಮ ವರ್ಗದ ವ್ಯಕ್ತಿಗೂ ಅನುಕೂಲವಾಗುವಂತೆ ಕಾಣುವುದಿಲ್ಲ. ಕಾರು, ಬೈಕು, ಆಟೋ, ಮನೆ, ಸರ್ಕಾರಿ ಕೆಲಸ, 10 ಸಾವಿರಕ್ಕಿಂತಲೂ ಅಧಿಕ ಮಾಸಿಕ ಆಧಾಯ, ನೀರಾವರಿ ಜಮೀನು, ಫ್ರಿಡ್ಜ್, ಲ್ಯಾಂಡ್ ಲೈನ್, ಇಷ್ಟರಲ್ಲಿ ಯಾವುದಾದರೂ ಒಂದನ್ನು ನಿಮ್ಮ ಕುಟುಂಬದ ಯಾವುದೇ ಸಧಸ್ಯರು ಹೊಂದಿದ್ದರೂ, ಆ ಇಡೀ ಕುಟುಂಬವೇ ಈ ಯೋಜನೆಯ ಅನ್ಹರ್ಹರಾಗುತ್ತಾರೆ. ಇದರ ಬದಲು, ನಿಮ್ಮ ದೇಹದಲ್ಲಿ ಪ್ರಾಣ ಇರುವುದಾದರೆ ಈ ಯೋಜನೆಗೆ ಅನ್ಹರ್ಹರಾಗುತ್ತೀರಾ ಎಂದು ಹೇಳಿದ್ದರೆ ಸರ್ಕಾರಿ ಕಚೇರಿಯ ಪ್ರಿಂಟರ್ ನ ಇಂಕ್ ಆದರೂ ಉಳಿತಾಯ ಆಗುತಿತ್ತೇನೋ.

ಈ ಯೋಜನೆಯಿಂದ ಯಾವ ಜನರಿಗೂ ಉಪಯೋಗವಿಲ್ಲ ಎಂದು ಅರಿತ ಕರ್ನಾಟಕ ಸರ್ಕಾರ ಪ್ರತಿಯೊಬ್ಬ ಕನ್ನಡಿಗನಿಗೂ ಉಪಯೋಗವಾಗುತ್ತಿರುವ ‘ಅರೋಗ್ಯ ಕರ್ನಾಟಕ’ ಯೋಜನೆಯನ್ನು ಕೈಬಿಡದೆ, ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸೇರಿಸಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಕೇವಲ 272 ಕೋಟಿ ರೂ. ಪಡೆಯುತ್ತಿದ್ದು, ಮಿಕ್ಕ 786 ಕೋಟಿ ರೂ. ಅನ್ನು ರಾಜ್ಯವೇ ಬರಿಸಲಿದೆ. ನಮ್ಮ ಕರ್ನಾಟಕ ಸರ್ಕಾರದ ಅರೋಗ್ಯ ಕರ್ನಾಟಕ ಯೋಜನೆ, ಮೋದಿಯ ಆಯುಷ್ಮಾನ್ ಭಾರತ್ ಯೋಜನೆಯಂತೆ ಕಳಪೆ ನಿಯಮಗಳನ್ನು ಹೊಂದದೆ, ಪ್ರತಿಯೊಬ್ಬ ಕನ್ನಡಿಗನಿಗೂ ಉಪಯೋಗವಾಗುವಂತಿದೆ.

Leave a Reply