ಟಿಕ್ ಟಾಕ್ ನಲ್ಲಿ ಈ ವಿಡಿಯೋ ಮಾಡಿದವರು ಆಕ್ಟಿವಾ ಹೋಂಡಾ ಗೆಲ್ಲಬಹುದು…!

ನಿಖಿಲ್ ಕುಮಾರಸ್ವಾಮಿ ಅಭಿನಯದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಸೀತಾರಾಮ ಕಲ್ಯಾಣ ಕನ್ನಡ ಜನತೆಗೆ ಸಂಕ್ರಾತಿಯ ಉಡುಗರೆಯಾಗಿ ಜನವರಿ 25ರಂದು ತೆರೆಗೆ ಅಪ್ಪಳಿಸಿ ಹೊಸ ದಾಖಲೆಗಳನ್ನು ಸೃಷ್ಟಿಸಲು ಸಜ್ಜಾಗಿದೆ. ಇದೇ ವೇಳೆ ಚಿತ್ರತಂಡ ಅಭಿಮಾನಿಗಳಿಗೆ ಹೋಂಡಾ ಆಕ್ಟಿವಾ ಗೆಲ್ಲುವ ಅಥವಾ ಚಿತ್ರತಂಡದೊಂದಿಗೆ ವಿಶೇಷ ಔತಣ ಕೂಟದಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ನೀಡುತ್ತಿದೆ. ಈ ಭರ್ಜರಿ ಉಡುಗರೆಯನ್ನು ನೀವು ಗೆಲ್ಲಲು ಮಾಡಬೇಕಾಗಿರುವುದು ಇಷ್ಟೇ! ಈಗಾಗಲೇ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಯನ್ನು ಗಳಿಸಿರುವ ಚಿತ್ರದ ‘ ನಿನ್ನ ರಾಜ ನಾನು ನನ್ನ ರಾಣಿ ನೀನು ‘ ಹಾಡಿಗೆ ಟಿಕ್ ಟಾಕ್ ನಲ್ಲಿ ನಿಮ್ಮ ಸಂಗಾತಿಯೊಂದಿಗೆ ಒಂದು ವಿಡಿಯೋ ಮಾಡಿ 6364741243 ನಂಬರ್ ಗೆ ಕಳುಹಿಸಿ. ಒಂದು ಅದೃಷ್ಟಶಾಲಿ ಜೋಡಿಗೆ ಹೊಂಡಾ ಆಕ್ಟಿವಾ ಗೆಲ್ಲುವ ಹಾಗೂ 25 ಜೋಡಿಗಳು ಚಿತ್ರತಂಡದೊಂದಿಗೆ ಔತಣ ಕೂಟದಲ್ಲಿ ಭಾಗವಹಿಸುವ ಅವಕಾಶ ನಿಮ್ಮದಾಗಿಸಿಕೊಳ್ಳಿ.  

Leave a Reply