‘ದೊಡ್ಡವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ನಾ…?’

‘ದೊಡ್ಡವರ ಮಕ್ಕಳಿಗೊಂದು ನ್ಯಾಯ, ಬಡವರ ಮಕ್ಕಳಿಗೊಂದು ನ್ಯಾಯ ನಾ? ರೇವಣ್ಣನ ಮಕ್ಕಳು, ಕುಮಾರಸ್ವಾಮಿ ಮಕ್ಕಳು, ಪರಿಮೇಶ್ವರ್ ಅವರ ಮಕ್ಕಳು ಇಂಗ್ಲಿಷ್ ಕಲಿಬೇಕು, ಆದರೆ ಕೂಲಿ ಮಾಡುವವರ ಮಕ್ಕಳು ಇಂಗ್ಲಿಷ್ ಕಲಿಬಾರದ?’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣನವರು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಸರ್ಕಾರೀ ಶಾಲೆಗಳನ್ನು ಆರಂಭಿಸುವ ಯೋಜನೆ ಬಗ್ಗೆ ತಕರಾರು ಮಾಡಿದವರ ಬಗ್ಗೆ ಗುಡುಗಿದ್ದಾರೆ.

IT ಅಧಿಕಾರಿಗಳ ಮೂಲಕ ಬಿಜೆಪಿ ಸೇರಲು ಸ್ಯಾಂಡಲ್ವುಡ್ ಸ್ಟಾರ್‌ಗಳಿಗೆ ಆಮಂತ್ರಣ ನೀಡಿದ ಅಮಿತ್ ಶಾ…!

ತರ್ಕ ಬದ್ಧವಾಗಿ ಯೋಚಿಸುವವನು ಯಾರು ಈ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ನಮ್ಮ ರಾಜ್ಯದ ಮಕ್ಕಳೇ ಅಂತ ಅಲ್ಲ ದೇಶದ ಯಾವುದೇ ಪ್ರದೇಶದ ಮಕ್ಕಳು ವಿಶ್ವ ಮಟ್ಟದಲ್ಲಿ ಸ್ಪರ್ಧಿಸುವಾಗ ಆಂಗ್ಲ ಭಾಷೆ ಬಹುಮುಕ್ಯವಾಗುತ್ತದೆ. ಇದು ಆಂಗ್ಲ ಭಾಷೆ ನಮ್ಮ ಕನ್ನಡಕ್ಕಿಂತಲೂ ಶ್ರೇಷ್ಠ ಎಂದು ಅಲ್ಲ, ಆಂಗ್ಲ ಭಾಷೆ ಜಾಗತಿಕ ಭಾಷೆಯಾಗಿ ಗುರುತಿಸಿಕೊಂಡಿದೆ ಎಂಬ ಕಾರಣದಿಂದ ಮಾತ್ರ. ಇದೇ ಕಾರಣದಿಂದ ಸಿಎಂ ಕುಮಾರಸ್ವಾಮಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

Leave a Reply