ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಬೆಂಬಲ : ರಾಜಕಾರಣಿಗೂ ನಾಯಕನಿಗೂ ಇರುವ ವ್ಯತ್ಯಾಸ ತೋರಿಸಿಕೊಟ್ಟು ಮಾದರಿಯಾದ ಹೆಚ್‍ಡಿಡಿ…!

ರಾಜಕಾರಣಿಗೂ ನಾಯಕನಿಗೂ ಇರುವ ವ್ಯತ್ಯಾಸವನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಕೇಂದ್ರ ಸರ್ಕಾರದ ಮೇಲ್ವರ್ಗದ ಹಿಂದುಳಿದವರಿಗೆ ಶೇ.10 ಮೀಸಲಾತಿ ತರುವ ನಿರ್ಧಾರಕ್ಕೆ ದೇವೇಗೌಡರು ಬೆಂಬಲ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ತರುವ ನಿರ್ಧಾರವನ್ನು ಜೆಡಿಎಸ್ ಬೆಂಬಲಿಸುತ್ತದೆ. ಸಮಾಜದ ಎಲ್ಲ ವರ್ಗದಲ್ಲಿರುವ ಬಡವರ ಏಳಿಗೆಗೆ ಜೆಡಿಎಸ್ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.

ರಾಜಕಾರಣಿಗಳು ಎಂದೂ ತಮ್ಮ ಪ್ರತಿಪಕ್ಷದವರ ನಿರ್ಧಾರವನ್ನು ಬೆಂಬಲಿಸುವುದಿಲ್ಲ. ಅದು ಸಮಾಜಕ್ಕೆ ಉತ್ತಮವಾದದ್ದು ಎಂದು ಗೊತ್ತಿದ್ದರೂ,ತಮ್ಮ ಸ್ವಾರ್ಥಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಸಮಾಜದ ಒಳಿತಿಗಾಗಿ ಶ್ರಮಿಸುವ ವ್ಯಕ್ತಿ, ಯಾವುದೇ ಪಕ್ಷದವರು ಒಳ್ಳೆಯ ನಿರ್ಧಾರಗಳನ್ನು ಕೈಗೊಂಡಾಗ ಅದನ್ನು ಬೆಂಬಲಿಸುತ್ತಾರೆ. ಇದು ಒಬ್ಬ ರಾಜಕಾರಣಿಗೂ, ನಾಯಕನಿಗೂ ಇರುವ ವ್ಯತ್ಯಾಸ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕೆಲಸಗಳನ್ನು ಮಾಡುತ್ತಾರೆ, ಆದರೆ ನಾಯಕರು ಯಾವಾಗಲೂ ನಿಸ್ವಾರ್ಥದಿಂದ ಸಮಾಜದ ಒಳಿತಿಗಾಗಿ ಶ್ರಮಿಸುತ್ತಾರೆ. ಇದು ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಎಂತ ಉತ್ತಮ ನಾಯಕ ಎಂದು ನಿರೂಪಿಸುವ ಒಂದು ಘಟನೆ.

Leave a Reply