ಇದು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವ ಸುದ್ದಿ…!

ಮಧ್ಯಯುಗದ ದಕ್ಷಿಣ ಭಾರತದ ಅತೀ ದೊಡ್ಡ ಸಾಮ್ರಾಜ್ಯವಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ವಿಶ್ವ ವಿಖ್ಯಾತ ಹಂಪಿಗೆ ಈಗ ಅಮೇರಿಕಾ ಮೂಲದ ನೂಯಾರ್ಕ್ ಟೈಮ್ಸ್ ಪತ್ರಿಕೆ ಪಟ್ಟಿ ಮಾಡಿರುವ 52 ಜಾಗತಿಕ ಸ್ಥಳಗಳಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಇದು ಪ್ರತಿಯೊಬ್ಬ ಭಾರತೀಯನು, ಅದರಲ್ಲೂ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವ ವಿಷಯ.

ಒಂದೊಂದು ಶಿಲೆಗಳು ಒಂದೊಂದು ಅದ್ಭುತ ಕತೆಯನ್ನು ಹೇಳುವ ಈ ಸ್ಥಳವನ್ನು ಯುನೆಸ್ಕೋದ ವಿಶ್ವ ಪರಂಪರೆ ತಾಣದ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈಗ ನೂಯಾರ್ಕ್ ಟೈಮ್ಸ್ ಪತ್ರಿಕೆ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಏಕೈಕ ಭಾರತದ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ಸ್ಥಾನವನ್ನು ಕೆರೆಬಿಯನ್ ದ್ವೀಪವಾದ ಪೂಯಿರ್ಟೋ ರಿಕೊ ಪಡೆದಿದೆ. ಹಂಪಿ ಬಗ್ಗೆ ವಿವರಣೆ ನೀಡುತ್ತಾ ” ಪ್ರವಾಸಿಗರು ಕಮಲಾಪುರದ ಪ್ಯಾಲೇಸ್ ಅಥವಾ ಕಿಷ್ಕಿಂದಾ ಕ್ಯಾಂಪ್ ನಲ್ಲಿನ ಟೆಂಟ್ ನಲ್ಲಿ ಉಳಿದುಕೊಳ್ಳಬಹುದು ಎಂದು ನೂಯಾರ್ಕ್ ಟೈಮ್ಸ್ ಪತ್ರಿಕೆ ತಿಳಿಸಿದೆ. ಸುಮಾರು 26 ಕಿಮಿ ವರೆಗೆ ತುಂಗಭದ್ರಾ ನದಿ ತೀರದಲ್ಲಿ ಹರಡಿರುವ ಹಂಪಿಗೆ  ಹೈದರಾಬಾದ್ ಅಥವಾ ಬಳ್ಳಾರಿ ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ತಲುಪಬಹುದು ಎಂದು ವಿವರಿಸಲಾಗಿದೆ.

Leave a Reply