ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನ ಆಸ್ಪತ್ರೆಯಲ್ಲಿ ಭೇಟಿಯಾಗಿ ಬುದ್ಧಿವಾದ ಹೇಳಿದ ಸಿಎಂ…!

ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೇಣುಗೋಪಾಲ್(18) ಎಂಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಅವನಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಘಟನೆ ಬಗ್ಗೆ ತಿಳಿದ ಕೂಡಲೇ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಬಿಡುವಿಲ್ಲದ ಕಾರ್ಯಗಳ ಮಧ್ಯೆಯೂ ಆಸ್ಪತ್ರೆಗೆ ಭೇಟಿ ನೀಡಿ ವೇಣುಗೋಪಾಲ್ ಅವರಿಗೆ ಬುದ್ದಿವಾದ ಹೇಳಿ ಅವನ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಮೆಟ್ರೋ ರೈಲು ಆಗಮಿಸುವ ವೇಳೆ ಸುಮಾರು 20 ಮೀಟರ್ ದೂರವಿದ್ದ ಯುವಕ ಏಕಾಏಕಿ ಹಳಿಗೆ ಹಾರಿದ್ದು, ಈ ವೇಳೆ ರೈಲು ಹಳಿಯ ಮಧ್ಯಭಾಗದಲ್ಲಿ ಬಿದ್ದ ಕಾರಣ ಆತ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೇಣುಗೋಪಾಲ್ ಅವರ ತಾಯಿ ಫೋನ್ ಜಾಸ್ತಿ ಉಪಯೋಗಿಸಬೇಡ ಎಂದು ತಿಳುವಳಿಕೆ ಹೇಳಿದ್ದಕ್ಕೆ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇದರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು ” ಇವನ ತಾಯಿ ಟೈಲರಿಂಗ್ ಕೆಲಸ ಮಾಡಿಕೊಂಡು ಮೂರು ಮಕ್ಕಳನ್ನು ಸಾಕುತ್ತಿದ್ದಾರೆ. ಎಲ್ಲ ಯುವಕರು ಮುಂಜಾನೆ ಬೇಗ ಎದ್ದು ಲವಲವಿಕೆಯಿಂದ ಕೆಲಸಗಳನ್ನು ಮಾಡುತ್ತಿದ್ದರೆ, ನೀನು ಸೋಂಬೇರಿಯಂತೆ ಬೆಳಗ್ಗೆ 10 ಘಂಟೆಯಾದರೂ ಎದ್ದೇಳುವುದಿಲ್ಲ ಎಂದು ಒಂದೆರಡು ಮಾತನಾಡಿದ್ದಾರೆ. ಆದರೆ ಆ ಯುವಕ ನನಗೆ ಏನಾಯಿತು ಎಂದು ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾನೆ. ನಾನು ಅವನಿಗೆ ಬುದ್ಧಿವಾದ ಹೇಳಿದ್ದೇನೆ. ಅವನ ಜೀವಕ್ಕೆ ಏನು ತೊಂದರೆಯಿಲ್ಲ.” ಎಂದು ಹೇಳಿದರು.

Leave a Reply