ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಅಳವಡಿಕೆಯನ್ನು ವಿರೋಧಿಸುವವರು ಇದನ್ನು ಓದಿ…!

ವ್ಯಕ್ತಿಗೆ ಬದುಕಲು ಗಾಳಿ, ನೀರು, ಆಹಾರ ಎಷ್ಟು ಮುಖ್ಯವೋ ಶಿಕ್ಷಣವೂ ಅಷ್ಟೇ ಮುಖ್ಯ. ಸಮಾಜದ ಬಹುತೇಕ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ದೊರಕುವುದು ಎಂದು ಅರಿತಿರುವ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದು ನಮ್ಮ ನಾಡಿನ ಭವಿಷ್ಯವನ್ನು ರೂಪಿಸುವ ಇಂದಿನ ಮಕ್ಕಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಉತ್ತೇಜಿಸುವ ಒಂದು ಉದ್ದಾಮ ನಿರ್ಧಾರ. ಅದು ನಮ್ಮ ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದು.

ಬಹುತೇಕ ಪೋಷಕರಿಗೆ ಶಿಕ್ಷಣದ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ಖಾಸಗಿ ವಿಧ್ಯಾ ಸಂಸ್ಥೆಗಳಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಸಲುವಾಗಿ ತಮ್ಮ ಜೀವನವನ್ನೇ ತೇಯುತ್ತಿದ್ದಾರೆ. ಇನ್ನು ಹಲವಾರು ಮಂದಿ, ಅಸಹಾಯಕತೆಯಿಂದ ಸರ್ಕಾರೀ ಶಾಲೆಗಳಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿಸುತ್ತಿರುತ್ತಾರೆ.

ಆದರೆ ಆ ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ, ಉನ್ನತ ಶಿಕ್ಷಣ ಪಡೆಯಲು ಮುಂದಾದಾಗ, ಆಂಗ್ಲ ಭಾಷೆಯಲ್ಲಿರುವ ಪಠ್ಯ ಪುಸ್ತಕಗಳನ್ನು ಗ್ರಹಿಸಲು ಸಾಧ್ಯವಾಗದೆ ಶಿಕ್ಷಣವನ್ನೇ ತೊರೆಯುತ್ತಾರೆ. ನಮ್ಮ ರಾಜ್ಯದ ಪ್ರತಿಭಾವಂತರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು, ಹಾಗು ಯಾವುದೇ ವ್ಯಕ್ತಿ ಒಂದು ಐಟಿ ಕಂಪನಿಯಲ್ಲಿ ನೌಕರಿ ಪಡೆಯಲು ಜಾಗತಿಕ ಭಾಷೆಯಾದ ಆಂಗ್ಲ ಭಾಷೆ ಬಹಳ ಮುಖ್ಯ ಪಾತ್ರವಹಿಸುತ್ತದೆ. ಇಂಗ್ಲೀಷ್ ಬರುವುದಿಲ್ಲ ಎಂಬ ಒಂದು ಅಂಶ, ಪ್ರತಿಭಾವಂತರಿಗೆ ದೌರ್ಬಲ್ಯವಾಗಿ ಕಾಡಬಾರದೆಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರ.

ಈಗ ಹೇಳಿ ನಮ್ಮ ರಾಜ್ಯದ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿ ಇರಲಿ ಎಂದು ಬಯಸಿ ಈ ತೆಗೆದುಕೊಂಡಿರುವ ನಿರ್ಧಾರ ತಪ್ಪೇ…?

One thought on “ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಅಳವಡಿಕೆಯನ್ನು ವಿರೋಧಿಸುವವರು ಇದನ್ನು ಓದಿ…!

  1. ಚಂದ್ರಶೇಖರ ಗೌಡ says:

    ಇಂಗ್ಲಿಶ್ ಒಂದು ಭಾಷೆ ಕಲಿಕೆಯಾಗಿ ಕಲಿಸಿದರೆ ಯಾರ ಅಭ್ಯಂತರವಿಲ್ಲ, ಕನ್ನಡ ಶಾಲೆ ಮುಚ್ಚಿ ಇಂಗ್ಲಿಶ್ ಮಾದ್ಯಮ ಪ್ರಾರಂಭಿಸೋದು ಎಷ್ಟು ಸರಿ ? ಮಕ್ಕಳ ಭವೀಸ್ಯದ ಜೊತೆಯಲ್ಲಿ ಆಟ ಆಡೋದು ಸರಿಯಾದ ನಡೆಯಲ್ಲ

Leave a Reply