ಸಾವಯವ ಕೃಷಿ ಮಾರ್ಗದರ್ಶಕ ಎಲ್.ನಾರಾಯಣ ರೆಡ್ಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು…!

ಹಂಪೆ ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ವಿಜೇತರಾದ ಪ್ರಗತಿಪರ ಮಾದರಿ ರೈತ ಎಲ್ ನಾರಾಯಣ ರೆಡ್ಡಿ(೮೦) ಅವರು ನಿಧನರಾಗಿದ್ದಾರೆ. ಜಪಾನಿನ ಮಸನವೋ ಫುಕುವೋಕಾ ಅವರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದ ನಾರಾಯಣ ರೆಡ್ಡಿ ಅವರು ರೈತರ ಕಷ್ಟಗಳಿಗೆ ಸರಳವಾದ ಪರಿಹಾರವನ್ನು ಹೇಳಿಕೊಡುವ ಮೂಲಕ ನಾಡಿನ ರೈತರಿಗೆ ಮಾರ್ಗದರ್ಶಿಯಾಗಿದ್ದರು.

ಇವರು ನಿಧನರಾದ ಸುದ್ದಿ ಕೇಳಿ ತೀವ್ರ ಬೇಸರಕ್ಕೆ ಒಳಗಾದ ರೈತ ಕುಟುಂಬದಿಂದ ಬಂದು ಮಹತ್ವದ ಸಾಧನೆಗಳನ್ನು ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದರು.

ಸಾವಯವ ಕೃಷಿಯ ಮಾರ್ಗದರ್ಶಕರಾಗಿದ್ದ ನಾಡೋಜ ಎಲ್. ನಾರಾಯಣ ರೆಡ್ಡಿ ಅವರು ದೈವಾಧೀನರಾದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಕೃಷಿಯ ಆಳ ಅಗಲ ಮತ್ತು ಅನುಭವ ಚಿಂತನೆಯನ್ನು ರೈತರಿಗೆ ದಾರೆ ಎರೆದಿದ್ದ ನಾರಾಯಣ ರೆಡ್ಡಿ ಅವರ ಅಗಲಿಕೆ ರೈತಕುಲಕ್ಕೆ ತುಂಬಲಾರದ ನಷ್ಟ ಎಂದು ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿ ಸಂತಾಪ ಸೂಚಿಸಿದರು.

Leave a Reply