ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರೇವಣ್ಣ ಖಡಕ್ ಎಚ್ಚರಿಕೆ…!

ಎಷ್ಟೋ ಸಂಸಾರದ ನೆಮ್ಮದಿಯನ್ನು ಹಾಲು ಮಾಡುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಶತಾಯ ಗತಾಯ ತಡೆಗಟ್ಟಲೇಬೇಕು ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರು ಸಿದ್ದರಾಗಿದ್ದಾರೆ. ಇದರಿಂದ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಎಲ್ಲೆಲ್ಲಿ ಬೇಕೋ ಅಲಲ್ಲಿ ಪೆಟ್ಟಿಗೆ ಅಂಗಡಿಯನ್ನುಇಟ್ಟುಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಬಡವರಿಗೆ ಕಷ್ಟ ನೀಡುತ್ತಿರುವ ದಂಧೆಯನ್ನು ಆದಷ್ಟು ಬೇಗ ನಿಲ್ಲಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಒಂದುವೇಳೆ ಅಭಕಾರಿ ಇಲಾಖೆ ಅಧಿಕಾರಿಗಳು ಕಟ್ಟು ನಿಟ್ಟಾದ ಕ್ರಮವನ್ನು ಕೈಗೊಳ್ಳದಿದ್ದರೆ
ಬೆಂಗಳೂರಿನಿಂದಲೇ ವಿಶೇಷ ತಂಡ ಕರೆಸುವೆ ಎಂದು ಅಬಕಾರಿ ಅಧಿಕಾರಿಗಳಿಗೆ ರೇವಣ್ಣ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಹಳ್ಳಿಯಲ್ಲಿ ಎಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೋ ಅವರನ್ನು ಒಂದು ವಾರದಲ್ಲಿ ಪತ್ತೆಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾರ ಅಂಗಡಿಯಿಂದ ಮದ್ಯ ಹೋಗಿರುತ್ತದೋ ಅಂತಹ ಅಂಗಡಿಯನ್ನು 30 ದಿನ ಸೀಜ್ ಮಾಡಿಸುತ್ತೇನೆ. ಬಳಿಕ ಅಂಗಡಿಯ ಪರವಾನಿಗೆಯನ್ನು ಕ್ಯಾನ್ಸಲ್ ಮಾಡಿಸುತ್ತೇನೆ. ಒಂದು ವೇಳೆ ಇಲ್ಲಿನ ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದರೆ ಬೆಂಗಳೂರಿನಿಂದ ಅಧಿಕಾರಿಗಳನ್ನು ಕಳುಹಿಸಬೇಕಾಗುತ್ತದೆ ಎಂದರು.

ಗ್ರಾಮೀಣ ಭಾಗದ ಬಡವರಿಗೆ ತೊಂದರೆಯಾಗಬಾರದು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಅವರು ಪ್ರತಿದಿನ ಕುಡಿದು ಹೆಂಡತಿ, ಮಕ್ಕಳಿಗೆ ಹೊಡೆಯುವುದು ಇದೆಲ್ಲ ಆಗಬಾರದು. ಈಗಾಗಲೇ ನಾನು ಎಸ್‍ಪಿ ಅವರಿಗೂ ಹೇಳಿದ್ದೇನೆ. ಅಬಕಾರಿ ಅಧಿಕಾರಿಗಳ ಜೊತೆಗೆ ಪೊಲೀಸರೂ ಕಾರ್ಯ ಪ್ರವೃತ್ತರಾಗಬೇಕು. ಜನರು ನೆಮ್ಮದಿಯಿಂದ ಇರಬೇಕು ಅಷ್ಟೇ ಎಂದು ರೇವಣ್ಣ ಹೇಳಿದರು.

One thought on “ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರೇವಣ್ಣ ಖಡಕ್ ಎಚ್ಚರಿಕೆ…!

  1. Ranadappa says:

    ಸರಿಯಾ ನಿದಾ೯ರ

Leave a Reply