ಮೋದಿ ಓಟ ನಿಲ್ಲಿಸುವ ತಾಕತ್ತು ಇರುವುದು ಜೆಡಿಎಸ್ ಗೆ ಮಾತ್ರ…!

ಕಳೆದ ವರ್ಷ ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೋಲುಣಿಸಿ ಸಮ್ಮಿಶ್ರ ಸರ್ಕಾರ ರಚಿಸಿರುವ ಜೆಡಿಎಸ್ ಪಕ್ಷದ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮುಂದಿನ ಲೋಕಸಭ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಕುರಿತು ಆತ್ಮವಿಶ್ವಾಸದ ಮಾತಗಳನ್ನು ಆಡಿದರು.

ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ ಹಾಗು ದಕ್ಷಿಣ ಭಾರತದ ಕೆಲವೇ ಕೆಲವು ಪ್ರಧಾನಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಆಡಳಿತ ಅವಧಿ ಕಮ್ಮಿಯಾಗಿದ್ದರು, ಯಾವುದೇ ಹಗರಣದಲ್ಲಿ ಭಾಗಿಯಾಗದ ನಿಷ್ಕಳಂಕ ಪ್ರಧಾನಿಯಾಗಿ ಉತ್ತಮ ಸೇವೆ ಸಲ್ಲಿಸಿದರು. ಆದರೆ ನರೇಂದ್ರ ಮೋದಿ ಅವರು 2ಜಿ, ರಫೇಲ್ ಒಪ್ಪಂದ ಹೀಗೆ ಹಲವಾರು ಹಗರಣದಲ್ಲಿ ಸಿಕ್ಕಿಬಿದಿದ್ದಾರೆ.

ಮೋದಿ ಓಟವನ್ನು ನಿಲ್ಲಿಸಲು ಜೆಡಿಎಸ್ ನಿಂದ ಮಾತ್ರ ಸಾಧ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ರಾಜ್ಯದ ಎಲ್ಲಾ 28ಕ್ಕೆ 28ಸ್ಥಾನಗಳನ್ನೂ ಜೆಡಿಎಸ್ ಗೆಲ್ಲಿಸುವಂತಹ ಕೆಲಸ ಮಾಡುತ್ತದೆ. ಬಿಜೆಪಿಯವರು ನಮ್ಮ ಸರ್ಕಾರಕ್ಕೆ ಹಲವಾರು ಬಾರಿ ಡೆಡ್‌ಲೈನ್ ನೀಡಿದ್ದರು. ಆದರೆ ಯಾವುದೇ ಡೆಡ್ ಲೈನ್‌ನಲ್ಲೂ ಸರ್ಕಾರ ಬೀಳಲಿಲ್ಲ. ನಮ್ಮ ಸರ್ಕಾರಕ್ಕೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವಿದೆ ಎಂದು ಹೇಳಿದರು.

One thought on “ಮೋದಿ ಓಟ ನಿಲ್ಲಿಸುವ ತಾಕತ್ತು ಇರುವುದು ಜೆಡಿಎಸ್ ಗೆ ಮಾತ್ರ…!

  1. Sumana Jyothi says:

    I love Appaji and kumaranna

Leave a Reply