ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಬರ ಅಧ್ಯಯನ ಕೈಗೊಂಡ ಸಣ್ಣ ಕೈಗಾರಿಕೆ ಸಚಿವ ಎಸ್ ಆರ್ ಶ್ರೀನಿವಾಸ್…!

ಮಳೆ ಅಭಾವದಿಂದ ಉಂಟಾಗಿರುವ ಹಲವು ಸಂಕಷ್ಟಗಳ ನಿವಾರಣೆಗೆ ಜನರು ಎದುರು ನೋಡುತ್ತಿರುವುದರ ನಡುವೆ ಬರಪೀಡಿತ ಜಿಲ್ಲೆಯಲ್ಲಿನ ಸ್ಥಿತಿಗತಿ ಮತ್ತು ಕೈಗೊಂಡಿರುವ ಪರಿಹಾರ ಕ್ರಮಗಳನ್ನು ವೀಕ್ಷಿಸಲು ರಾಜ್ಯ ಸರ್ಕಾರದ ಬೆಂಗಳೂರು ವಿಭಾಗದ ಸಚಿವ ಸಂಪುಟ ಸಮಿತಿಯು ಶುಕ್ರವಾರ ಬರ ಅಧ್ಯಯನ ಪ್ರವಾಸ ಕೈಗೊಂಡಿದೆ. ಇದರಲ್ಲಿ ಸಣ್ಣ ಕೈಗಾರಿಕೆ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಸಕ್ರಿಯರಾಗಿದ್ದರು.

ಎಸ್ ಆರ್ ಶ್ರೀನಿವಾಸ್ ಅವರು ತಂಡದೊಂದಿಗೆ ಕೋಲಾರದಿಂದ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಎಚ್.ಕ್ರಾಸ್​ಗೆ ಮಧ್ಯಾಹ್ನ ಆಗಮಿಸಿ, ಗಂಭೀರನಹಳ್ಳಿಯಲ್ಲಿ ತೊಗರಿ ಮತ್ತು ಅವರೆ ಬೆಳೆಯ ಬೆಳೆ ನಷ್ಟ, ಹಿರೇಬಲ್ಲ ಕೆರೆಯಲ್ಲಿ ನಡೆದಿರುವ ನರೇಗಾ ಕಾರ್ಯಕ್ರಮ, ಹೊಸಪೇಟೆ ಪಂಚಾಯಿತಿಯ ಕಳ್ಯಾಪುರದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ನೀರು ಪೂರೈಕೆ ಹಾಗೂ ಟಾಸ್ಕ್​ಫೋರ್ಸ್ ಕಾಮಗಾರಿ, ಸಂಜೆ ಮಲ್ಲೇನಹಳ್ಳಿ ಮುಸುಕಿನ ಜೋಳದ ಬೆಳೆಯ ಬೆಳೆ ನಷ್ಟ ವೀಕ್ಷಿಸಿದರು. ನಂತರ ಚಿಕ್ಕಬಳ್ಳಾಪುರ ಜಿಪಂ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ತದನಂತರ ಪ್ರಗತಿ ಪರ ರೈತರೊಂದಿಗೆ ಸಂವಾದ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.


ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಡಿಯುವ ನೀರು ಮತ್ತು ಪಶುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು.

Leave a Reply