ಹೈ ಕಮಾಂಡ್ ಗೆ ಬಿಜೆಪಿ ಶಾಸಕರಿಂದಲೇ ಎಚ್ಚರಿಕೆ…! – ಕರ್ನಾಟಕದಲ್ಲಿ ಹೆಚ್ ಡಿಡಿ ಹೆಚ್ ಡಿಕೆ ವಿರುದ್ಧ ಹೋಗುವುದು ಬೆಂಕಿ ಜೊತೆ ಸರಸವಾಡಿದಂತೆ…!

ರಾಜ್ಯದ ಜನರ ಆಶಯದಂತೆ ನಮ್ಮ ನಾಡು,ನುಡಿ, ಭಾಷೆಗೆ ಪ್ರಾಮುಖ್ಯತೆ ಕೊಡುವ ಪ್ರಾದೇಶಿಕ ಪಕ್ಷದ ಒಬ್ಬ ನಾಯಕ ಮುಖ್ಯಮಂತ್ರಿಯಾಗಿ ಜನಪರ ಆಡಳಿತವನ್ನು ನೆಡೆಸುತ್ತಿರುವುದರಿಂದ ಕರ್ನಾಟಕ ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ.

ಸಿಕ್ಕಿದ್ದೇ ಸೀರುಂಡೆ ಎಂದು ಬಿ.ಎಸ್ ಯಡಿಯೂರಪ್ಪ ವಿರೋಧ ಪಕ್ಷದ ನಾಯಕನಾಗಿಯಾಗಿಯಾದರು ರಾಜ್ಯದ ಹಿತಾಸಕ್ತಿಗೆ ಕೆಲಸ ಮಾಡುವ ಬದಲು ಅಧಿಕಾರ ದಾಹದಿಂದ ‘ಆಪರೇಷನ್ ಕಮಲ’ದಂತಹ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಒಮ್ಮೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ‘ನಿಮಗೆ ಯೋಗ್ಯತೆ ಇದಿದ್ದರೆ, ಜನರೇ ನಿಮ್ಮನ್ನು ಸಿಎಂ ಕುರ್ಚಿಯಲ್ಲಿ ಕೂರಿಸುತ್ತಿದ್ದರು. ಈಗ ನೀವು ಆಪರೇಷನ್ ಕಮಲ ಮಾಡುವ ಬದಲು, ಜನಪರ ಕೆಲಸಗಳಲ್ಲಿ ಹಾಗೂ ಪಕ್ಷದ ಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ’ ಎಂದು ಎಚ್ಚರಿಕೆ ನೀಡಿ ಬುದ್ಧಿವಾದ ಹೇಳಿದ್ದರು. ಇಷ್ಟು ದಿನ ಯಡಿಯೂರಪ್ಪನವರು, ಸರ್ಕಾರ ಇಂದು ಬೀಳುತ್ತದೆ, ನಾಳೆ ಬೀಳುತ್ತದೆ ಎಂದು ಡೆಡ್ಲೈನ್ ಗಳನ್ನು ನೀಡಿ ರಾಜ್ಯದ ಜನತೆ ಎದುರು ಜೋಕೆರ್ ನಂತೆ ಆಗಿದ್ದರೂ, ಈಗ ಮತ್ತೆ ಅದೇ ಕೆಲಸಕ್ಕೆ ಕೈ ಹಾಕಿದ್ದಾರೆ.

ಬಿ.ಎಸ್ ಯಡಿಯೂರಪ್ಪನವರ ಅಧಿಕಾರ ದಾಹ ಬಿಜೆಪಿ ಪಕ್ಷದವರಿಗೇ ಹೇಸಿಗೆಯುಂಟು ಮಾಡಿದೆ. ಈಗ ಮತ್ತೆ ಅವರ ಚೇಷ್ಟೆಗಳನ್ನು ನೋಡಿ, ನೇರ ಹೈ ಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ದೇವೇಗೌಡರು ಹಾಗು ಕುಮಾರಸ್ವಾಮಿ ಅವರ ವಿರುದ್ಧ ಹೋಗುವುದು ಜೇನು ಗೂಡಿಗೆ ಕೈ ಹಾಕಿದಂತೆ. ಕೇವಲ ಅವರ ವಿರುದ್ಧ ಮಾತನಾಡಿದ ಕಾರಣ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿ, ಮುಖ್ಯಮಂತ್ರಿ ಪಟ್ಟವನ್ನೇ ಕಳೆದುಕೊಳ್ಳ ಬೇಕಾಯಿತು. ಈಗ ಯಡಿಯೂರಪ್ಪ ಮಾಡುತ್ತಿರುವ ಈ ಕುತಂತ್ರದಿಂದ ಲೋಕ ಸಭ ಚುನಾವಣೆಯಲ್ಲಿ ಮೋದಿ ಅವರಿಗೆ ತೀವ್ರ ಪೆಟ್ಟು ಬೀಳುತ್ತದೆ. ಕನಿಷ್ಠ 6-7 ಕ್ಷೇತ್ರಗಳನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

One thought on “ಹೈ ಕಮಾಂಡ್ ಗೆ ಬಿಜೆಪಿ ಶಾಸಕರಿಂದಲೇ ಎಚ್ಚರಿಕೆ…! – ಕರ್ನಾಟಕದಲ್ಲಿ ಹೆಚ್ ಡಿಡಿ ಹೆಚ್ ಡಿಕೆ ವಿರುದ್ಧ ಹೋಗುವುದು ಬೆಂಕಿ ಜೊತೆ ಸರಸವಾಡಿದಂತೆ…!

  1. Lakshmipathy says:

    Yes, JDS is a farmers party and incase bjp or congress try to distabalize it, sure it will be retaliated immediately…eradu pakshagalu tadaknodkobeku Ange…..

Leave a Reply