ನೀವು ಮೂರ್ಖರಾಗಿ ಜನರನ್ನು ಮೂರ್ಖನ್ನಾಗಿ ಮಾಡಬೇಡಿ…! – ಮಾಧ್ಯಮಗಳ ವಿರುದ್ಧ ಹೆಚ್ಡಿಕೆ ಗರಂ..!

ಟಿಆರ್ಪಿಗಾಗಿ ಯಾರ ಮನೆ ಹಾಲು ಮಾಡಲು ಸಹ ಸಿದ್ಧವಿರುವ ಸುದ್ದಿ ವಾಹಿನಿಗಳ ವಿರುದ್ಧ ಹಲವಾರು ಖ್ಯಾತ ನಟರು, ರಾಜಕಾರಣಿಗಳು ಚಳಿ ಬಿಡಿಸಿದ್ದಾರೆ. ಆದರೂ, ಸುದ್ದಿ ವಾಹಿನಿಗಳು(ಕೆಲವು) ತಮ್ಮ ಚಾಳಿ ಬಿಟ್ಟಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಲ್ಲ ಸಲ್ಲದ ತಪ್ಪು ಮಾಹಿತಿಗಳನ್ನು ನೀಡುತ್ತಿರುವ ಸುದ್ದಿ ವಾಹಿನಿಗಳ ವಿರುದ್ಧ ಇಂದು, ಅಷ್ಟು ಸುಲಭವಾಗಿ ತಾಳ್ಮೆ ಕಳೆದುಕೊಳ್ಳದ ಶಾಂತ ಸ್ವಭಾವದ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ತಿರುಗಿ ಬಿದಿದ್ದಾರೆ.

ಈ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ನನಗಿಂತಲೂ ಹೆಚ್ಚು ನಿಮಗೆ ರಾಜಕೀಯದಲ್ಲಿ ಏನು ಬೆಳವಣಿಗೆಗಳು ಆಗುತ್ತಿವೆ ಎಂದು ಗೊತ್ತಿದೆಯಾ? ನೀವು ಮನರಂಜನೆ ವಾಹಿನಿಗಳಂತೆ ಇಲ್ಲ ಸಲ್ಲದ ಊಹಾಪೋಹಗಳನ್ನು ಮಾಡಿಕೊಂಡು ಧಾರಾವಾಹಿಗಳ ರೀತಿಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದೀರ. ನೀವು ಮೂರ್ಖರಾಗುವುದಲ್ಲದೆ, ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರ. ಇನ್ನು ಮುಂದೆ ನೀವು ಮಾಡುತ್ತಿರುವ ಕೆಲಸಗಳಿಂದ ಕರ್ನಾಟಕ ಜನತೆ ಸುದ್ದಿ ವಾಹಿನಿಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಹಳ್ಳವನ್ನು ನೀವೇ ತೋಡಿಕೊಳ್ಳುತ್ತಿದ್ದೀರ. ಎಲ್ಲರ ತಾಳ್ಮೆಗೂ ಒಂದು ಮಿತಿ ಇದೆ. ನಾನು ಹುಡುಗಾಟಕ್ಕೆ ಆರಾಮಾಗಿ ಇದ್ದೇನಾ? ಶಾಸಕರು ನಿಮ್ಮ ಸಂಪರಕದಲ್ಲಿ ಇರದೇ ಇರಬಹುದು, ನನ್ನ ಸಂಪರ್ಕದಲ್ಲಿ ಎಲ್ಲರು ಇದ್ದಾರೆ. ನನಗೆ ಸಂಖ್ಯಾಭಲವಿದೆ.ಆಪರೇಷನ್ ಯಾಕೆ ಮಾಡಲಿ?
ನಾನು ಆರಾಮಾಗಿ ಇದ್ದೇನೆ. ದೇವೇಗೌಡರು ಆರಾಮಾಗಿ ಇದ್ದಾರೆ ಎಂದು ಹೇಳಿ ಮಾಧ್ಯಮದವರಿಗೆ ಬೆವರು ಇಳಿಸಿದರು.

One thought on “ನೀವು ಮೂರ್ಖರಾಗಿ ಜನರನ್ನು ಮೂರ್ಖನ್ನಾಗಿ ಮಾಡಬೇಡಿ…! – ಮಾಧ್ಯಮಗಳ ವಿರುದ್ಧ ಹೆಚ್ಡಿಕೆ ಗರಂ..!

  1. ಖಂಡಿತಾ ಸರ್ ನಿಮ್ಮ ತುಂಬಾ ನಿಜ ಅದರಲ್ಲೂ ಬಿಟಿವಿ ನ್ಯೂಸ್ ಚಾನೆಲ್ ಅವರಿಗೆ ತುಂಬಾನೇ ನಿರಾಸೆಯಾಗಿದೆ

Leave a Reply