ಶ್ರೀಗಳ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ತಿಳಿದು ತಮ್ಮ ಕಾರ್ಯಕ್ರಮವನ್ನು ರದ್ದು ಮಾಡಿ ಸಿದ್ದಗಂಗ ಮಠಕ್ಕೆ ತೆರಳಿದ ಸಿಎಂ…!

ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿರುವ ಶತಾಯುಷಿ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನಿರಂತರವಾಗಿ ಸುಮಾರು ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿದ್ದರು, ಅವರ ಆರೋಗ್ಯದಲ್ಲಿ ಕಿಂಚಿತ್ತೂ ಸುಧಾರಣೆ ಕಾಣುತ್ತಿಲ್ಲ.

ಸಿದ್ದಗಂಗಾ ಶ್ರೀಗಳ ಪರಮ ಭಕ್ತರಾಗಿರುವ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈ ತಿಂಗಳಲ್ಲೇ ಹಲವು ಬಾರಿ ಶ್ರೀಗಳನ್ನು ಭೇಟಿ ಮಾಡಿ, ತಮ್ಮ ನಿರತ ಕೆಲಸಗಳ ಮಧ್ಯೆಯೂ ದಿನ ನಿತ್ಯ ಶ್ರೀಗಳ ಆರೋಗ್ಯ ವಿಚಾರಕ್ಕಾಗಿ ಸಿದ್ದಗಂಗಾ ಮಠದೊಂದಿಗೆ ದೂರವಾಣಿ ಮೂಲಕ ಪ್ರತಿ ಗಂಟೆಗೊಮ್ಮೆ ಮಠದಿಂದ ಮಾಹಿತಿ ಪಡೆಯುತ್ತಿದ್ದರು.

ಇಂದು ಸಿಎಂ ಕುಮಾರಸ್ವಾಮಿ ಅವರು ಹಿರೇಕೆರೂರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು, ಆದರೆ ಶ್ರೀಗಳ ಅರೋಗ್ಯ ತೀವ್ರ ಹದಗೆಟ್ಟಿದೆ ಎಂದು ತಿಳಿದ ಕೂಡಲೇ, ಆ ಕಾರ್ಯಕ್ರಮವನ್ನು ರದ್ದು ಪಡಿಸಿ, ಶ್ರೀಗಳನ್ನು ಭೇಟಿ ಮಾಡಲು ತೆರಳಿದ್ದಾರೆ.

Leave a Reply