ಸಿದ್ದಗಂಗ ಶ್ರೀಗಳು ಹಾಗೂ ಸಿಎಂ ಕುಮಾರಸ್ವಾಮಿ ಅವರ ಅಪರೂಪದ ಬಾಂಧವ್ಯ…! “ನೀನು ಜನರಿಗಾಗಿ ಶ್ರಮಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತದೆ!”

ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿದ ಇಷ್ಟಲಿಂಗ ಪ್ರಿಯರಾದ ತ್ರಿವಿಧ ದಾಸೋಹಿ, ಸಿದ್ದಗಂಗ ಮಠದ ಪರಮಪೂಜ್ಯ ಡಾ ಶಿವಕುಮಾರ ಸ್ವಾಮಿಜಿ ಅವರನ್ನು ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಶ್ರೀಗಳು ಇಂದು ಬೆಳಗೆ 11.44ರ ಸುಮಾರು ಲಿಂಗೈಕ್ಯರಾಗಿದ್ದರೆ.

ಶಿವಕುಮಾರ ಸ್ವಾಮೀಜಿ ಅವರು ಶಿವೈಕ್ಯರಾಗಿದ್ದಾರೆ ಎಂದು ಅವರ ಪರಮಭಕ್ತರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಘೋಷಿಸಿದರು. ಇನ್ನು ಸ್ವಾಮೀಜಿಯ ಅಂತಿಮ ದರ್ಶನ ಪಡೆಯುವ ಭಕ್ತರಿಗೆ ಅನುಕೂಲವಾಗಲು ಉಚಿತ ಬಸ್ ಸೇವೆಯನ್ನು ಒದಗಿಸಲಾಗುವುದು ಎಂದರು.

ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಾಲ್ಯದಿಂದಲೂ ತಮ್ಮ ತಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೊಂದಿಗೆ ಮಠಕ್ಕೆ ಶ್ರೀಗಳ ಆಶೀರ್ವಾದ ಪಡೆದುಕೊಳ್ಳುಲು ಹೋದಾಗ, ಶ್ರೀಗಳು ‘ನಿಮ್ಮ ಮಗನು ಕೂಡ ನಿಮ್ಮಂತೆಯೇ ಜನ ಸೇವೆ ಮಾಡುತ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಲು ಸಾಧ್ಯವೇ ಇಲ್ಲ ಎಂಬುದಕ್ಕೆ ಕುಮಾರಸ್ವಾಮಿ ಅವರೇ ಸಾಕ್ಷಿ.

ಮೊದಲಿನಿಂದಲೂ ಶ್ರೀಗಳು ರಾಜಕೀಯದಲ್ಲಿ ನಿರಾಸಕ್ತರಾಗಿದ್ದರೂ, ಕುಮಾರಸ್ವಾಮಿ ಅವರೆಂದರೆ ಶ್ರೀಗಳಿಗೆ ಬಹಳ ಪ್ರೀತಿ. ಅವರು ಯಾವುದೇ ಜನಪರ ಕೆಲಸ ಮಾಡುವ ಅಥವ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಶ್ರೀಗಳ ಸಲಹೆ ಹಾಗು ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯದ ರೈತರ ಸಾಲ ಮನ್ನ ಮಾಡುವ ನಿರ್ಧಾರವನ್ನು ಶ್ರೀಗಳಿಗೆ ತಿಳಿಸಿದಾಗ ‘ ಜನರಿಗಾಗಿ ನೀನು ಶ್ರಮಿಸುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ’ ಎಂದು ಹೇಳಿದ್ದರು.

ಕುಮಾರಸ್ವಾಮಿ ಅವರು 2006ರಲ್ಲಿ ಮೊದಲ ಬಾರಿಗೆ ಜನಾದೇಶದಂತೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯಲ್ಲಿ ಶ್ರೀಗಳಿಗೆ ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ ಗೌರವಾನ್ವಿತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದರು.

ಈಗ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದೊಡನೆ ಶ್ರೀಗಳಿಗೆ ಭಾರತ ಸರ್ಕಾರದ ಅತ್ಯನ್ನತ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಿದ್ದಾರೆ. ಈಗ ಶ್ರೀಗಳ ಅಗಲಿಕೆಯಿಂದ ಕುಮಾರಸ್ವಾಮಿ ಅವರು ಬಹಳಷ್ಟು ಮನನೊಂದಿದ್ದಾರೆ.

Leave a Reply