ಇಹಲೋಕ ತ್ಯಜಿಸಿದ ನಡೆದಾಡುವ ದೇವರು…!

ಸಿದ್ದಗಂಗ ಮಠದ ಶತಾಯುಷಿ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಕ್ಷಾಂತರ ಭಕ್ತರನ್ನು ಅಗಲಿ ಇಹಲೋಕ ತ್ಯಜಿಸಿದ್ದಾರೆ. ಹಲವಾರು ದಿನಗಳಿಂದ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿರುವ, ಜನರು ಭಕ್ತಿಯಿಂದ ನಡೆದಾಡುವ ದೇವರು ಎಂದು ಕರೆಯುವ ಸಿದ್ದಗಂಗ ಶ್ರೀಗಳ ಆರೋಗ್ಯದಲ್ಲಿ ತೀವ್ರ ಏರು ಪೆರು ಉಂಟಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಕೆಲವು ದಿನಗಳ ಹಿಂದೆ ಆಸ್ಪತ್ರಯಿಂದ ಮಠಕ್ಕೆ ಹಟ ಮಾಡಿ ಹಿಂತಿರುಗಿದ್ದರು. ಕಳೆದು ಮೂರ್ನಾಲ್ಕು ದಿನಗಳಿಂದಲೂ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ ಪರಮೇಶ್ ಅವರು, ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ, ಆದರೆ ಯಾವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಶ್ರೀಗಳ ಆರೋಗ್ಯದ ಗಂಭೀರ ಸ್ಥಿತಿಯ ಬಗ್ಗೆ ಮುಂಸೂಚನೆ ನೀಡಿದ್ದರು.

ತಮ್ಮ ಇಚ್ಛೆಯಂತೆ ಇಂದು ಬೆಳ್ಳಗೆ ೧೧:೦೫ಕ್ಕೆ ಮಠದಲ್ಲೇ ತಮ್ಮ ಕೊನೆಯುಸಿರು ಎಳೆದಿದ್ದಾರೆ. ಲಕ್ಷಾಂತರ ಭಕ್ತಾದಿಗಳು ಶ್ರೀಗಳ ಅಂತಿಮ ದರ್ಶನಕ್ಕಾಗಿ ಸಿದ್ದಗಂಗ ಮಠದ ಬಳಿ ಸೇರಿದ್ದಾರೆ.

Leave a Reply