ನಿಖಿಲ್ ತಾನು ಮಾಜಿ ಪ್ರಧಾನಿ ಹಾಗು ಮುಖ್ಯಮಂತ್ರಿಯ ಮಗನೆಂದೇ ಮರೆತುಬಿಟ್ಟಿದ್ದರು…! – ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ

ವರ್ಷದ ಅತ್ಯಂತ ನಿರೀಕ್ಷಿತ ಚಿತ್ರವಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಅಭಿನಯಿಸಿರುವ ‘ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಿಗೆ ಹಬ್ಬದ ಉಡುಗರೆ ನೀಡಿದ್ದಾರೆ.ಈ ಟ್ರೇಲರ್ ಅನ್ನು ಬಿಡುಗಡೆ ಆದ ಕೇವಲ ಎರಡೇ ದಿನಗದಲ್ಲಿ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವುದರಿಂದ, ಚಿತ್ರವು ಕನ್ನಡ ಚಿತ್ರರಂಗದಲ್ಲೇ ಹೊಸದೊಂದು ಧಾಖಲೆ ಕಡೆ ದಾಪುಗಾಲು ಇಡುತ್ತಿದೆ.

ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಚಿತ್ರ ಯಶಸ್ವಿಯಾಗಲಿ ಎಂದು ಕೋರಿ ಮಾತನಾಡಿದ ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಅವರು, ಕುರುಕ್ಷೇತ್ರ ಚಿತ್ರದ ಚಿತ್ರೀಕರಣದ ವೇಳೆ ತಾವು ಗಮನಿಸಿದ ನಿಖಿಲ್ ಅವರ ಕಾರ್ಯೆನಿಷ್ಠೆ ಬಗ್ಗೆ ಹಾಡಿ ಹೊಗಳಿದರು.

‘ ಕುರುಕ್ಷೇತ್ರದ ಕತೆ ಈಗಾಗಲೇ ಹಲವಾರು ಚಿತ್ರಗಳು, ಹಾಗು ಧಾರಾವಾಹಿಗಳಲ್ಲಿ ಬಂದಿದೆ. ಆದ್ದರಿಂದ ನನಗೆ ಇದು ನಮ್ಮ ಕುರುಕ್ಷೇತ್ರ ಎಂದು ಹೆಮ್ಮೆ ಪಡುವಂತಹ ಸಿನಿಮ ಮಾಡಬಯಸಿದೆ. ಇದೇ ಕಾರಣದಿಂದ ನಾನು ಚಿತ್ರಕ್ಕೆ ಬಹುತೇಕ ಕನ್ನಡದವರನ್ನೇ ಕಲಾವಿದರನ್ನಾಗಿ ಆಯ್ಕೆ ಮಾಡಿದ್ದೇನೆ.

ಇನ್ನು ಕತೆಯಲ್ಲಿ ಅಭಿಮನ್ಯು ಪಾತ್ರ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ನಾನು ಆಗ ತಾನೇ ಜಾಗ್ವಾರ್ ಚಿತ್ರವನ್ನು ನೋಡಿದ್ದೆ. ನಿಖಿಲ್ ಅವರ ಚೊಚ್ಚಲ ಸಿನಿಮಾದಲ್ಲೇ ಅದ್ಭುತವಾಗಿ ನಟಿಸಿದ್ದನ್ನು ನೋಡಿ ಆಶ್ಚರ್ಯವಾಗಿತ್ತು. ಆಗ ನನಗೆ ಅಭಿಮನ್ಯು ಪಾತ್ರಕ್ಕೆ ನಿಖಿಲ್ ಅವರೇ ಸೂಕ್ತ ಎಂದು ಅನಿಸಿದರಿಂದ, ಕುಮಾರಸ್ವಾಮಿ ಅವರ ಮೂಲಕ ನಿಕಿಲ್ ರನ್ನು ಅಪ್ರೋಚ್ ಮಾಡಿದೆ. ಅವರು ಬಹಳ ಸಂತೋಷದಿಂದ ಒಪ್ಪಿಕೊಂಡರು.

ಚಿತ್ರೆಕ್ಕೆ ನಿಖಿಲ್ ಅವರು ಎಷ್ಟು ಶ್ರಮಿಸಿದ್ದಾರೆ ಎಂದು ನನಗೇ ಗೊತ್ತು. ಒಂದು ತಿಂಗಳಿಗೂ ಹೆಚ್ಚು ಕತ್ತಿ ವರಸೆ, ಕುದುರೆ ಸವರಿ ತರಬೇತಿ ಪಡೆದರು. ಚಿತ್ರೀಕರಣದ ಸ್ಥಳಕ್ಕೆ, ನಿರ್ದೇಶಕರು 8 ಘಂಟೆಗೆ, ಸಾಹಸ ನಿರ್ದೇಶಕರು 8 .30 ಗೆ ಬರುತ್ತಿದ್ದರು. ಆದರೆ ನಿಖಿಲ್ ಮಾತ್ರ ಬೆಳಗಿನ ಜಾವ 7 ಘಂಟೆಗೆ ಕ್ಯಾರಾವ್ಯಾನ್ ನಲ್ಲಿ ಇರುತ್ತಿದ್ದರು. ಅವರು ಮಾಜಿ ಪ್ರಧಾನ ಮಂತ್ರಿಯ ಮೊಮ್ಮಗ, ಮುಖ್ಯ ಮಂತ್ರಿಯ ಮಗನೆಂದು ಮರೆತೇ ಬಿಟ್ಟಿದ್ದರು. ಪ್ರತಿಯೊಬ್ಬ ಪ್ರೇಕ್ಷಕನು ಚಿತ್ರಮಂದಿರದಿಂದ ಹೊರ ಬರುವಾಗ ಅಭಿಮನ್ಯು ಪಾತ್ರವನ್ನು ಮೆಲಕು ಹಾಕುವಂತೆ ನಿಖಿಲ್ ನಟಿಸಿದ್ದಾರೆ ‘ ಎಂದು ಹೇಳಿದರು.

Leave a Reply