ಕರ್ನಾಟಕಕ್ಕೆ ಬರಲು ಮೋದಿಗೆ ಭಯವಂತೆ…!

ಅಖಂಡ ಭಾರತದವು ಲಕ್ಷಾಂತರ ಮಕ್ಕಳಿಗೆ ವಿಧ್ಯಾಧಾನ ಮಾಡಿರುವ ಮಹಾಪುರುಷ ಸಿದ್ದಗಂಗ ಮಠದ ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಯಿಂದ ಅನಾಥವಾಗಿದೆ. ಮಠದ ಮಕ್ಕಳು ಕಂಬನಿ ಮಿಡಿಯುತ್ತಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕಾಗಿ ಭಕ್ತಸಾಗರವೇ ತುಮುಕೂರಿನಲ್ಲಿ ಸಜ್ಜಾಗಿದೆ.

ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಸಾರಥ್ಯದಲ್ಲಿ, ಅಂಬರೀಷ್ ಅವರ ಅಂತಿಮ ಸಂಸ್ಕಾರದಂತೆ ಇವರದ್ದು ಕೂಡ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲಾಗುತ್ತಿದೆ. ದೇಶದ ನಾಯಕರು, ಪ್ರಸಿದ್ಧ ವ್ಯಕ್ತಿಗಳೂ ಕೂಡ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಶ್ರೀಗಳ ಅಂತಿಮ ದರ್ಶನ ಪಡೆದುಕೊಳ್ಳಲು ಕರ್ನಾಟಕಕ್ಕೆ ಬರಲು ಸಾಧ್ಯವಿಲ್ಲವಂತೆ. ಪಾಪ ಅದೇನೋ ಅಭದ್ರತೆಯ ಭಯವಂತೆ! ರಾಜ್ಯದ ಜನತೆಯ ಬಳಿ ಮತ ಭಿಕ್ಷೆ ಬೇಡಲು ಕರ್ನಾಟಕಕ್ಕೆ ಬಂದಾಗ, ಬಾಲಿವುಡ್ ತಾರೆಯರ ಮದುವೆ ಊಟಕ್ಕೆ ಹೋಗುವಾಗ, ಭಯೋತ್ಪಾದಕರ ತವರೂರಾದ, ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಎದ್ನೋ ಬಿಧ್ನೋ ಎಂದು ಹೋದಾಗ ಇರದ ಅಭದ್ರತೆಯ ಭೀತಿ, ಶ್ರೀಗಳ ಅಂತಿಮ ದರ್ಶನ ಪಡೆದುಕೊಳ್ಳಲು ಬರಬೇಕಾದಾಗ ಮೋದಿ ಅವರಿಗೆ ಬಂದಿದೆ.

Leave a Reply