ಸರಳತೆಯ ಸರದಾರ ವಾಸಣ್ಣ…!

ಲಕ್ಷಾಂತರ ಮಕ್ಕಳಿಗೆ ವಿದ್ಯಾಧಾನ ಮಾಡಿರುವ ತ್ರಿವಿಧ ದಾಸೋಹಿ ಸಿದ್ದಗಂಗ ಮಠದ ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವುಂಟಾಗಿದ್ದು, ರಾಜ್ಯದಲ್ಲಿ ಸ್ಮಶಾನ ಮೌನ ಆವರಿಸಿದೆ. ನಾಡಿನ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಅತ್ಯಂತ ಪ್ರೀತಿ ಪಾತ್ರರಾದ ಶ್ರೀಗಳನ್ನು ಕಳೆದುಕೊಂಡಿರುವ ದುಕ್ಕದ ಸಂದರ್ಭದಲ್ಲಿಯೂ, ಅವರ ಅಂತಿಮ ದರ್ಶನಕ್ಕೆ, ರಾಜ್ಯದ ಮೂಲೆ ಮೂಲೆಯಿಂದಲೂ ಲಕ್ಷಾಂತರ ಭಕ್ತಾದಿಗಳು ಹಾತೊರೆದು ಬಂದಾಗ ಯಾವುದೇ ಅಹಿತಕರ ಘಟನೆ ಸಂಭವಿಸದೆ ಶಾಂತಿಯುತವಾಗಿ ನಡೆಯುವಂತೆ ಸಾರಥ್ಯವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪೂಜ್ಯ ಗುರುಗಳಿಗೆ ನಮನ ಸಲ್ಲಿಸಲು ಬರುತ್ತಿರುವ ಅಸಂಖ್ಯಾತ ಭಕ್ತರಿಗೆ ಸರ್ವ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿಯನ್ನು ಸಿಎಂ ಕುಮಾರಸ್ವಾಮಿಯವರು, ಕ್ಯಾಬಿನೆಟ್ ಮಂತ್ರಿಯಾದ ಎಸ್ ಆರ್ ಶ್ರೀನಿವಾಸ್ ರವರಿಗೆ ವಹಿಸಿದ್ದು, ಸಚಿವ ಶ್ರೀನಿವಾಸ್ ಹಾಗೂ ಅವರ ತಂಡದವರು ಭಕ್ತಾದಿಗಳಿಗೆ ಸ್ವತಃ ತಾವೇ ಅನ್ನ ಸಂತರ್ಪಣೆಯನ್ನು ಏರ್ಪಡಿಸಿ, ವಿತರಿಸಿ ಮತ್ತೊಮ್ಮೆ ತಮ್ಮ ಸರಳತೆಯನ್ನು ಮೆರೆದಿದ್ದಾರೆ.

ಅಲ್ಲದೆ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲತೆ ಉಂಟಾದಲ್ಲಿ ನೇರವಾಗಿ ಸಚಿವ ಶ್ರೀನಿವಾಸ್ ಮತ್ತವರ ತಂಡವದವರನ್ನು ಸಂಪರ್ಕಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು .

Leave a Reply