ಮೋದಿ ತಾವು ‘ಚಾಯ್ ವಾಲ’ ಎಂದು ಹೇಳಿಕೊಂಡಿದ್ದು ಪ್ರಚಾರದ ಗಿಮ್ಮಿಕ್ ಅಷ್ಟೇ…!?

ನರೇಂದ್ರ ಮೋದಿ ಎಂದಿಗೂ ಚಹಾ ಮಾರಿಲ್ಲ. ಚಹಾ ಮಾರುತ್ತಿದ್ದವ ಇಂದು ದೇಶದ ಪ್ರಧಾನಿಯಾಗಿದ್ದಾರೆ ಎಂದು ತಮ್ಮನ್ನು ತಾವು ವಿಜೃಂಭಿಸಿಕೊಳ್ಳಲು ಹೀಗೆ ಹೇಳಿಕೊಳ್ಳುತ್ತಾರೆ. ಪ್ರಚಾರಕ್ಕಾಗಿ ಪ್ರಧಾನಿಗಳು ಚಹಾ ಮಾರುತ್ತಿದ್ದರು ಎಂಬ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ ಅಷ್ಟೇ.

ಈ ಮಾತನ್ನು ನಾವು ಹೇಳುತ್ತಿಲ್ಲ. ಸುಮಾರು ಅರ್ಧ ದಶಕದಿಂದ ಮೋದಿಯನ್ನು ಬಲ್ಲವರು ಹೇಳುತ್ತಿದ್ದಾರೆ. ಹೌದು. ಒಂದೇ ಸ್ಕೂಟರ್ ನಲ್ಲಿ ಆರ್ ಎಸ್‍ಎಸ್ ಪರೇಡ್ ಗೆ ಮೋದಿ ಜೊತೆ ತೆರಳುತ್ತಿದ್ದ ಪ್ರಸಕ್ತ ಅಂತರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಡಿಯಾ ಅವರು ಮೋದಿಯ ಅಸಲಿ ಬಣ್ಣವನ್ನು ಬಯಲು ಮಾಡಿದ್ದಾರೆ.

ನಾನು ನರೇಂದ್ರ ಮೋದಿ ಅವರನ್ನು 43 ವರ್ಷಗಳಿಂದ ಬಲ್ಲೆ. ಇಷ್ಟು ವರ್ಷದಲ್ಲಿ ಒಮ್ಮೆಯೂ ಮೋದಿ ಅವರು ಚಹಾ ಮಾರಿರುವುದನ್ನು ನೋಡಿಲ್ಲ. ಪ್ರಚಾರಕ್ಕಾಗಿ ಪ್ರಧಾನಿಗಳು ಚಹಾ ಮಾರುತ್ತಿದ್ದರು ಎಂಬ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ. ನಾನೊಬ್ಬ ವೈದ್ಯನಾಗಿದ್ದು, ಪರಿಚಯಸ್ಥರಲ್ಲಿ ಈ ಬಗ್ಗೆ ವಿಚಾರಿಸಿದ್ರೆ ಯಾರ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ. ಮೋದಿ ಚಹಾ ಮಾರಿರುವುದನ್ನು ಇದೂವರೆಗೂ ಯಾರು ಸಾಬೀತು ಮಾಡಿಲ್ಲ ಎಂದು ಪ್ರವೀಣ್ ತೊಗಡಿಯಾ ಹೇಳಿದ್ದಾರೆ.

ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಮ ಮಂದಿರ ನಿರ್ಮಾಣ ಮಾಡುವ ಉದ್ದೇಶವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಮುಂದಿನ ಐದು ವರ್ಷ ಅವರು ರಾಮ ಮಂದಿರ ನಿರ್ಮಾಣ ಮಾಡಲಾರರು. ನರೇಂದ್ರ ಮೋದಿ ಮತ್ತು ಬೈಯಾಜಿ ಜೋಶಿ ಅವರು ದೇಶವನ್ನು ಕತ್ತಲಿನಲ್ಲಿ ಇರಿಸಿದ್ದಾರೆ. ತ್ರಿವಳಿ ತಲಾಖ್ ಗಾಗಿ ಮಧ್ಯರಾತ್ರಿ ಕಾನೂನು ರಚಿಸುವ ಇವ್ರು ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲವೇಕೆ ಎಂದು ಪ್ರವೀಣ್ ತೊಗಡಿಯಾ ಪ್ರಶ್ನೆ ಮಾಡಿದ್ದಾರೆ.

Leave a Reply