ಅದು ಇಂದಿಗೂ ಪೊಲೀಸರಿಗೆ ಕಾಡುವ ದುಃಸ್ವಪ್ನವಾಗಿ ಉಳಿದುಹೋಗಿರುವ ದಿನಗಳು…!

ಅಧಿಕಾರ ಸ್ವೀಕರಿಸಿದೊಡನೆ ಸಾಲ ಮನ್ನಾದಂತಹ ಹಲವಾರು ಜನಪರ ಯೋಜನೆಗಳ ಮೂಲಕ ರಾಜ್ಯದ ಜನತೆಯ ಪ್ರೀತಿಗೆ ಪಾತ್ರರಾಗುತ್ತಿರುವ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ತಮ್ಮ ದಕ್ಷ ಕಾರ್ಯವೈಖರಿಯಿಂದಲೂ ಜನರಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.

ನಿಮಗೆ ಗೊತ್ತಿರುವ ಹಾಗೆ ವರನಟ ಡಾ ರಾಜಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರ ಸುಗಮವಾಗಿ ಅಂದುಕೊಂಡಂತೆ ನಡೆಯಲಿಲ್ಲ. ಅಂದಿನ ಸರ್ಕಾರದ ಅಜಾಗೃತೆಯಿಂದ, ಇಡೀ ಬೆಂಗಳೂರಿನ ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು ಹಾಗೂ ಖಾಸಗಿ ಭದ್ರತಾ ರಕ್ಷಕರು ರಾಜ್ಯದಲ್ಲಿ ಹುಚ್ಚೆದ್ದಂತೆ ಧಾವಿಸುತ್ತಿದ್ದ ಜನಸಮೂಹವನ್ನು ನಿಯಂತ್ರಿಸಲು ವಿಫಲವಾಗಿ ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಿದ್ದವು, ಅಲ್ಲಿಲ್ಲಿ ತೆರೆದಿದ್ದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.

ದುಃಖದಿಂದ ಆಕ್ರೋಶಭರಿತರಾಗಿದ್ದ ಅಭಿಮಾನಿಗಳು ಕಲ್ಲು ತೂರಾಟಕ್ಕೂ ಇಳಿದಿದ್ದರು, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದರು. ಅಭಿಮಾನಿಗಳ ಹಿಂಸಾಚಾರದಲ್ಲಿ ನೂರಾರು ವಾಹನಗಳು ಸುಟ್ಟು ಕರಕಲಾಗಿ ಹೋದರೆ, ಅಮೂಲ್ಯವಾದ ಹಲವಾರು ಜೀವಗಳು ಬಲಿಯಾಗಿ ಹೋಗಿದ್ದವು. ಇಡೀ ಬೆಂಗಳೂರು ನಗರ ಅಘೋಷಿತ ಬಂದ್ ಆಚರಿಸವಂತ ಪರಿಸ್ಥಿತಿ ಎದುರಾಗಿತ್ತು. ಈ ದಿಗ್ಗಜರ ನಿಧನದ ದಿನ ಉಂಟಾದ ಮಿತಿ ಮೀರಿದ ಹಿಂಸಾಚಾರ, ಸರ್ಕಾರಕ್ಕೆ ಈಗಲೂ ದುಃಸ್ವಪ್ನವಾಗಿ ಕಾಡುತ್ತದೆ.

ಆದರೆ ಇತ್ತೀಚಿಗೆ ಇಹಲೋಕ ತ್ಯಜಿಸಿದ, ರಾಜ್ ಹಾಗೂ ವಿಷ್ಣು ಅವರಷ್ಟೇ ಅಭಿಮಾನಿಗಳನ್ನು ಹೊಂದಿರುವ ಡಾ ಅಂಬರೀಷ್ ಅವರು ಹಾಗು ಅವರಷ್ಟೇ ಭಕ್ತ ಸಮೂಹವನ್ನು ಹೊಂದಿರುವ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ಸಂಸ್ಕಾರದ ವೇಳೆ ಹಾಗು ಇಷ್ಟು ವರುಷ ನಮ್ಮ ಬೆಂಗಳೂರು ನಗರಕ್ಕೆ ಕಳಂಕವಾಗಿದ್ದ ಹೊಸ ವರ್ಷಾಚರಣೆಯಾ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸುವ್ಯವಸ್ಥೆ ಮಾಡಿ ಸಾರಥ್ಯವಹಿಸಿದ ಸಿಎಂ ಕುಮಾರಸ್ವಾಮಿ ಅವರ ದಕ್ಷ ಆಡಳಿತ ವೈಖರಿ ಹಾಗೂ ಸಮಯ ಪ್ರಜ್ಞೆಯನ್ನು ಮೆಚ್ಚಿಕೊಳ್ಳಲೇಬೇಕು.

One thought on “ಅದು ಇಂದಿಗೂ ಪೊಲೀಸರಿಗೆ ಕಾಡುವ ದುಃಸ್ವಪ್ನವಾಗಿ ಉಳಿದುಹೋಗಿರುವ ದಿನಗಳು…!

Leave a Reply