ಮೋದಿಗೆ ಬುದ್ದಿವಾದ ಹೇಳಿದ ಬಾಲಿವುಡ್ ತಾರೆ ರಾಖಿ ಸಾವಂತ್…!

ಪ್ರಧಾನಿ ನರೇಂದ್ರ ಮೋದಿಯ ಆಡಳಿತದಿಂದ ಬೇಸತ್ತು ಹೋಗಿರುವ ದೇಶದ ಜನತೆಯ ಪರವಾಗಿ ಬಾಲಿವುಡ್ ತಾರೆ ರಾಖಿ ಸಾವಂತ್ ಅವರು ಮೋದಿಗೆ ಬುದ್ದಿವಾದ ಹೇಳಿದ್ದಾರೆ. ನೀವು ಸ್ಟಾರ್ ಗಳನ್ನು ಭೇಟಿ ಮಾಡುವ ಬದಲು ಬಡವರನ್ನು, ರೈತರನ್ನು ಭೇಟಿಯಾಗಿ ಎಂದು ಬುದ್ದಿವಾದ ಹೇಳಿದ್ದಾರೆ.

ಇನ್ಸ್ಟ್ರಾಗ್ರಾಮ್ ಗೆ ರಾಖಿ ಸಾವಂತ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು ಅದರಲ್ಲಿ ಮೋದಿಯವರೇ ನೀವು ಬಾಲಿವುಡ್ ಸ್ಟಾರ್ ಗಳನ್ನು ದಿನನಿತ್ಯ  ಭೇಟಿ ಮಾಡುತ್ತಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕಾದ್ರೆ ಸೆಲೆಬ್ರಿಟಿಗಳ ಬದಲು ಬಡವರು, ರೈತರನ್ನು ಭೇಟಿ ಮಾಡಿ, ಅವರ ಸಮಸ್ಯೆಗೆ ಪರಿಹಾರವನ್ನು ಕೊಡಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ದೇಶದ ಅತ್ಯುತ್ತಮ ನಾಯಕರ ಪಟ್ಟಿ ಸೇರಿಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದ ಮೋದಿಗೆ ಈಗ ಕೇವಲ ಸಿನಿಮಾ ತಾರೆಯರಿಂದ ಬುದ್ದಿವಾದ ಹೇಳಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಎಷ್ಟೇ ಆದರೂ ದೇಶದ ಜನರ ಅನಿಸಿಕೆಯು ಇದೆ ಅಲ್ಲವೇ…?

Leave a Reply