ಸೀತಾರಾಮ ಕಲ್ಯಾಣ ವೀಕ್ಷಿಸಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದೇನು…?!

ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಇಂದು(25th) ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಆರ್ಭಟಿಸಲು ಶುರು ಮಾಡಿದೆ. ಇದರ ಹಿನ್ನಲೆಯೆಯಲ್ಲಿ ಚಿತ್ರತಂಡ ನೆನ್ನೆ ಪ್ರೀಮಿಯರ್ ಷೋ ಒಂದನ್ನು ಏರ್ಪಡಿಸಿತ್ತು. ನಾಗತಿಹಳ್ಳಿ ಚಂದ್ರಶೇಖರ್, ಬಿ ಸಿ ಪಾಟೀಲ್, ಕೆಎಸ್ ಈಶ್ವರಪ್ಪ, ಜಿ ಪರಮೇಶ್ವರ್, ಸಿದ್ದರಾಮಯ್ಯ, ವಿಎಸ್ ಉಗ್ರಪ್ಪ, ಜಿಟಿ ದೇವೇಗೌಡ, ಬಂಡೆಪ್ಪ ಕಾಶೆಂಪುರ್, ಡಿಸಿ ತಮ್ಮಣ್ಣ ಹೀಗೆ ಹಲವಾರು
ವಿವಿಧ ಪಕ್ಷಗಳ ರಾಜಕೀಯ ನಾಯಕರು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

ಚಿತ್ರ ನೋಡಿದ ಎಲ್ಲಾ ಗಣ್ಯರು ನಿಖಿಲ್ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟು, ಚಿತ್ರ ಸಾರುವ ಉತ್ತಮ ಸಂದೇಶದ ಬಗ್ಗೆ ಹಾಡಿ ಹೊಗಳಿದರು. ಇದೊಂದ ಕೌಟುಂಬಿಕ ಚಿತ್ರವಾದ್ದರಿಂದ, ಹಲವಾರು ಮಂದಿ ಡಾ. ರಾಜ್ ಅವರ ಸಿನಿಮಾ ನೋಡಿದಂತೆ ಆಯಿತು ಎಂದು ಸಂತಸ ವ್ಯಕ್ತ ಪಡಿಸಿದರು.

ಬಿಜೆಪಿ ಪಕ್ಷದ ನಾಯಕ ಕೆಎಸ್ ಈಶ್ವರಪ್ಪನವರು ‘ ಸೀತಾರಾಮ ಕಲ್ಯಾಣ ಚಿತ್ರ ನಿಖಿಲ್ ಕುಮಾರಸ್ವಾಮಿ ಅವರ ಪ್ರತಿಭೆಯನ್ನು ಹೊರತಂದಿರುವ ಒಂದು ವಿಶೇಷ ಸಿನಿಮಾ. ಪ್ರೇಕ್ಷಕರಿಗೆ ಚಿತ್ರದ ಉದ್ದಕ್ಕೂ ಮನರಂಜನೆಯನ್ನು ನೀಡುತ್ತಾ, ರೈತರಿಗೆ ಆದರ್ಶವಾಗಿ ಇರಬೇಕು ಎಂಬ ವಿಶೇಷ ಸಂದೇಶ, ಕೌಟುಂಬಿಕ ಸಂಬಂಧ ಹಾಗೂ ಸ್ನೇಹ ಸಂಬಂಧಗಳ ಮಹತ್ವವನ್ನು ಸಾರುವ ಒಂದು ವಿಭಿನ್ನ ಚಿತ್ರ ಇದಾಗಿದೆ. ಸೀತಾರಾಮ ಕಲ್ಯಾಣ ಚಿತ್ರ ಜನರ ಜೀವನಕ್ಕೆ ಮಾರ್ಗದರ್ಶನವಾಗುತ್ತದೆ.’ ಎಂದು ಚಿತ್ರದ ಯಶಸ್ವಿಯಾಗಲಿ ಎಂದು ಕೋರುತ್ತಾ ಚಿತ್ರವನ್ನು ಹಾಡಿ ಹೊಗಳಿದರು.

Leave a Reply