ನಾಯಕತ್ವಕ್ಕೆ ಗುಡ್ ಬೈ! : ಕಿಚ್ಚ ಸುದೀಪ್ ಕೊಟ್ರು ಷಾಕಿಂಗ್ ನ್ಯೂಸ್

ನಮ್ಮ ನೆಚ್ಚಿನ ನಟರನ್ನು ಕ್ರೀಡಾಂಗಣದಲ್ಲಿ ನಮ್ಮ ನೆಚ್ಚಿನ ಕ್ರೀಡಿಯನ್ನು ಆಡುವುದನ್ನು ನೋಡುವುದು ಒಂದು ರೋಮಾಂಚಕ ಅನುಭವ. ಅಭಿಮಾನಿಗಳ ಈ ಫ್ಯಾಂಟಸಿಯನ್ನು ನನಸು ಮಾಡಿದ್ದು ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್). ಆರು ವರ್ಷದ ಹಿಂದೆ ಆರಂಭವಾದ ಸಿಸಿಎಲ್ ಟೂರ್ನಮೆಂಟ್, ಮೊದಲ ಆವೃತ್ತಿಯಿಂದಲೂ ಯಶಸ್ವಿಯಾಗಿದೆ. ನಮ್ಮ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು, ಆರು ಆವೃತ್ತಿಯಲ್ಲೂ, ನಮ್ಮ ಕಿಚ್ಚ ಸುದೀಪ್ ಅವರು ಎರಡು ಬಾರಿ ಕಪ್ ಗೆಲ್ಲುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಆದರೆ ಈಗ ಸುದೀಪ್ ಅವರು ಅಭಿಮಾನಿಗಳಿಗೆ ಒಂದು ಆಘಾತಕಾರಿ ವಿಷಯವನ್ನು ನೀಡಿದ್ದಾರೆ. ಮುಂದಿನ ಆವೃತ್ತಿಯಿಂದ ಕಿಚ್ಚ ನಮ್ಮ ತಂಡದ ನಾಯಕತ್ವದ ಜವಾಬ್ದಾರಿಯಿಂದ ಹೆಂದೆ ಸರಿಯಲಿದ್ದಾರೆ!

ಹೌದು. ಕಿಚ್ಚ ಸುದೀಪ್ ಅವರು ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಅವರು ಇನ್ನು ಮುಂದೆ ಕೇವಲ ಒಬ್ಬ ಆಟಗಾರನಾಗಿ ತಂಡದಲ್ಲಿ ಮುಂದುವರೆಯಲಿದ್ದಾರೆ. ಆದರೆ, ಅವರ ಈ ನಿರ್ಧಾರಕ್ಕೆ ಕಾರಣವನ್ನು ಇನ್ನು ಬಹಿರಂಗ ಪಡಿಸಿಲ್ಲ. ಇದು ನಿಜಕ್ಕೂ ಅಭಿಮಾನಿಗಳಿಗೆ ಬೇಸರದ ಸಂಗತಿ.

ಸುದೀಪ್ ಅವರು ನಾಯಕತ್ವವನ್ನು ತೊರೆಯುವ ಹಿನ್ನಲೆಯಲ್ಲೇ, ಮುಂದಿನ ನಾಯಕನಾಗಿ ತಂಡದ ಸ್ಟಾರ್ ಆಟಗಾರನಾದ ಪ್ರದೀಪ್ ಅವರ ಹೆಸರನ್ನು ಸೂಚಿಸಿದ್ದಾರೆ.

Leave a Reply